ಜೀನ್ಸ್ ಈಗ ಎಲ್ಲರಿಗೂ ಇಷ್ಟವಾಗುವ ಉಡುಗೆ. ಜೀನ್ಸ್ ಅನೇಕ ಹುಡುಗಿಯರಿಗೆ ಆರಾಮವೆನಿಸುತ್ತದೆ. ಸಾಮಾನ್ಯವಾಗಿ ನೀಲಿ ಇಲ್ಲ ಕಪ್ಪು ಬಣ್ಣದ ಜೀನ್ಸ್ ಧರಿಸಲು ಹುಡುಗಿಯರು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಳಿ ಬಣ್ಣದ ಜೀನ್ಸ್ ಫ್ಯಾಷನ್ ಆಗ್ತಾ ಇದೆ.
ಬಿಳಿ ಬಣ್ಣದ ಜೀನ್ಸ್ ಒಳ್ಳೆ ಲುಕ್ ನೀಡುತ್ತದೆ. ಆದ್ರೆ ಬಿಳಿ ಜೀನ್ಸ್ ಮೇಲೆ ಯಾವ ಬಟ್ಟೆ ಧರಿಸೋದು ಎಂಬ ಪ್ರಶ್ನೆ ಅನೇಕರದ್ದು. ನೀಲಿ ಹಾಗೂ ಕಪ್ಪು ಜೀನ್ಸ್ ನಂತೆ ಎಲ್ಲ ಬಣ್ಣದ ಟಾಪ್ ಗೆ ಬಿಳಿ ಜೀನ್ಸ್ ಹೊಂದಿಕೆಯಾಗೋದಿಲ್ಲ.
ನಿಮ್ಮ ಫ್ಯಾಷನ್ ಸ್ವಲ್ಪ ಭಿನ್ನವಾಗಿರಲಿ. ಹಾಗಾಗಿ ಬಿಳಿ ಜೀನ್ಸ್ ಜೊತೆ ಫ್ಲೋರಲ್ ಪ್ರಿಂಟ್ ನ ಬಲೂನ್ ಸಟೈಲ್ ನಲ್ಲಿರುವ ಟಾಪ್ ಹಾಕಿ. ಇದು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ಬಿಳಿ ಜೀನ್ಸ್ ಜೊತೆ ತಿಳಿ ನೀಲಿ ಬಣ್ಣದ ಡೆನಿಮ್ ಶರ್ಟ್ ಧರಿಸಬಹುದು. ಇದ್ರ ಜೊತೆಗೆ ಮ್ಯಾಚಿಂಗ್ ಪರ್ಸ್ ಅಥವಾ ಆಭರಣ ಹಾಕಿದ್ರೆ ನಿಮ್ಮ ಲುಕ್ ಬದಲಾಗಲಿದೆ.
ಜೀನ್ಸ್ ಜೊತೆ ಜೆಕ್ ಪ್ರಿಂಟ್ ಶರ್ಟ್ ಅಥವಾ ಟಾಪ್ ಕೂಡ ಧರಿಸಬಹುದು. ಇದ್ರ ಜೊತೆಗೆ ಡಾರ್ಕ್ ಕಲರ್ ಶರ್ಟ್, ಕುರ್ತಾ ಅಥವಾ ಟಾಪ್ ಟ್ರೈ ಮಾಡಬಹುದು.
ಕಪ್ಪು ಬಣ್ಣದ ಸ್ಪೆಗಟಿ ಟಾಪ್ ಅಥವಾ ಶ್ರಗ್ ಜೊತೆ ಬಿಳಿ ಜೀನ್ಸ್ ಹಾಕಬಹುದು. ಇತ್ತೀಚಿನ ದಿನಗಳಲ್ಲಿ ಉದ್ದದ ಶ್ರಗ್ ಫ್ಯಾಷನ್ ಆಗಿದೆ. ಬಿಳಿ ಶ್ರಗ್ ಜೊತೆ ಯಾವುದೇ ಟಾಪ್ ಹೊಂದುತ್ತದೆ.