ಈ ರಾಶಿಯವರಿಗಿದೆ ಇಂದು ಉತ್ತಮ ಸ್ಥಾನ ಪ್ರಾಪ್ತಿ ಯೋಗ

 

ಮೇಷ : ಭೂಮಿಗೆ ಸಂಬಂಧಪಟ್ಟ ವ್ಯವಹಾರ ಅಧಿಕ ಲಾಭ ತರುವುದು. ಸಂಸಾರದ ಕೆಲವು ಗುಟ್ಟುಗಳು ಯಾರ ಬಳಿಯೂ ಚರ್ಚಿಸದೆ ಇರುವುದು ಒಳಿತು. ಕುಟುಂಬದ ಆಸ್ತಿ ವ್ಯವಹಾರಕ್ಕೆ ನಿಮ್ಮಲ್ಲಿಯೇ ಪರಸ್ಪರ ಮಾತನಾಡಿಕೊಂಡು ಬಗೆಹರಿಸಿಕೊಳ್ಳಿ.

ವೃಷಭ : ಇಂದು ನೀವು ಸ್ನೇಹಜೀವಿ, ಪ್ರೇಮ ಜೀವಿ ಆಗಿರುವಿರಿ. ಒಡನಾಟಗಳಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಿರುತ್ತದೆ. ಇಂದು ನಿಮ್ಮ ಹರ್ಷಕ್ಕೆ ಪಾರವೇ ಇಲ್ಲ. ಪ್ರೀತಿಯಲ್ಲಿನ ಸ್ವಾರ್ಥವೂ ಅದು ಪ್ರೇಮ ಪರಾಕಾಷ್ಟೆ ಆಗಿರುತ್ತದೆ. ನಿಮ್ಮ ಸಂಗಾತಿಯೊಡನೆ ಕೋಪ, ಪ್ರೇಮ ಎಲ್ಲವೂ ಇದೆ ಇಂದು.

ಮಿಥುನ : ಆತ್ಮೀಯರ ಉತ್ತಮ ಸಲಹೆಯಿಂದ ಮಾನಸಿಕ ಚಿಂತೆ ಹಾಗೂ ಒತ್ತಡವು ದೂರವಾಗುವುದು. ನಿಮ್ಮಲ್ಲಿನ ಕೆಲಸದ ಚಿಂತೆಯಿಂದ ಮಾನಸಿಕ ಖಿನ್ನತೆ ಆಗುತ್ತಿದೆ, ವಿಶ್ರಾಂತಿ ಅಗತ್ಯವಾಗಿ ಬೇಕಾಗಿದೆ. ನಿಮ್ಮ ಕೆಲಸದ ಪ್ರಯತ್ನದಿಂದ ಉತ್ತಮವಾದ ಸ್ಥಾನ ಪ್ರಾಪ್ತಿ ಆಗಲಿದೆ.

ಕಟಕ : ಕುಟುಂಬವನ್ನು ಸಂತೋಷಪಡಿಸಲು ಇಂದು ನೀವು ವಿಶೇಷ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಆರೈಕೆ, ಪ್ರೀತಿ ನಿಮ್ಮ ಕೆಲಸದ ಗುಣಗಳಿಂದ ಆಪ್ತರು ಮೂಕವಿಸ್ಮಿತರಾಗಿ ನಿಮ್ಮನ್ನು ದೊಡ್ಡ ಮಟ್ಟದಲ್ಲಿ ನೋಡುವ ದಿನವಿದು.

ಸಿಂಹ : ಇಂದು ನಿಮ್ಮ ಕೆಲಸದಲ್ಲಿ ಉಪ ಕೆಲಸಗಳು ನಿಮ್ಮ ಆರ್ಥಿಕ ವೃದ್ಧಿಗೆ ಸಹಕಾರಿಯಾಗಲಿದೆ. ಪ್ರಯಾಣಕ್ಕೆ ಸೂಕ್ತವಾದ ದಿನವಲ್ಲ. ಮದುವೆಗೆ ಸನ್ನದ್ಧರಾಗಿರುವವರು ಶೀಘ್ರದಲ್ಲೇ ದಿನಾಂಕ ನಿಶ್ಚಯವಾಗುವುದು. ಪ್ರೀತಿಯಿಂದ ಎಲ್ಲರ ಮನವನ್ನು ಗೆಲ್ಲುವಿರಿ.

ಕನ್ಯಾ : ನಿಮ್ಮಲ್ಲಿನ ಸಾಮಾಜಿಕ ಕ್ಷೇತ್ರದಲ್ಲಿನ ತುಡಿತವನ್ನು ನಿರ್ಲಕ್ಷ ಮಾಡದಿರಿ. ಸಮಯ ಹೊಂದಾಣಿಕೆ ಮಾಡಿಕೊಂಡು ಕುಟುಂಬದೊಂದಿಗೆ ಹಾಗೆಯೇ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ನಿಮಗೆ ಸಂತೋಷ ನೀಡುವುದು. ನಿಮ್ಮ ಕಾರ್ಯ ಮಗ್ನತೆಯಿಂದ ಒತ್ತಡವನ್ನು ಜಯಿಸುವಿರಿ.

ತುಲಾ : ನಿಮ್ಮ ಕನಸಿನ ಯೋಜನೆಯು ಆಮೆಗತಿಯಲ್ಲಿ ಸಾಗುತ್ತಿದೆ. ಯೋಜನೆಗೆ ಚುರುಕುತನ ನೀಡಲು ಪ್ರಯತ್ನಿಸುವುದು ಒಳ್ಳೆಯದು. ಸುತ್ತಲಿನ ವಾತಾವರಣವೂ ಪ್ರೇಮ ಪರಾಕಾಷ್ಟೆಯನ್ನು ತಲುಪುವಲ್ಲಿ ಯಶಸ್ವಿಯಾಗುವುದು. ನಿಮ್ಮಲ್ಲಿನ ಚೈತನ್ಯವು ವೃದ್ಧಿಯಾಗುತ್ತಿದೆ.

ವೃಶ್ಚಿಕ : ಇಂದು ನೀವು ಮನರಂಜನೆ, ಕಲೆ, ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿ ಮೂಡುವುದು. ಯಾವುದೇ ಒಂದು ವಿಷಯವನ್ನು ಚರ್ಚಿಸುವಾಗ ಮಾತಿನ ಭರದಲ್ಲಿ ಭರವಸೆಯನ್ನು ನೀಡಬೇಡಿ. ನಿಮ್ಮ ಯೋಜನೆಯ ಬದ್ಧತೆ ಹಾಗೂ ಪ್ರಯೋಜನ ಲಾಭಾಂಶವನ್ನು ಹಿರಿಯರ ಜೊತೆ ಚರ್ಚಿಸಿ ಪ್ರಾರಂಭ ಮಾಡಿ.

ಧನು : ನೀವು ನಿಮ್ಮ ಸಮಯದ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಪ್ರಯತ್ನಪಡಿ. ಪ್ರೇಮಿಗಳು ತಮ್ಮ ಪ್ರೀತಿಪಾತ್ರರನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂಬುದು ಇಂದು ಮನವರಿಕೆ ಮಾಡಿಕೊಡಲಿದ್ದಾರೆ.

ಮಕರ : ಆಕರ್ಷಕ ಜಾಹೀರಾತಿಗೆ ಮರುಳಾಗಿ ಹೂಡಿಕೆಗಳನ್ನು ಮಾಡದಿರಿ. ನಿಪುಣರ ಸಹಾಯವನ್ನು ಪಡೆಯಿರಿ ವಿಶೇಷವಾಗಿ ದೀರ್ಘ ಕಾಲದ ಹೂಡಿಕೆಗಳು ಲಾಭದಾಯಕವಾಗಿರುತ್ತದೆ. ಇಂದು ಕುಟುಂಬದ ಜೊತೆಗೆ ಭೋಜನ ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ.

ಕುಂಭ : ಬಂಧು ವರ್ಗದ ಜನರು ನಿಮ್ಮನ್ನು ವಿಶೇಷ ವ್ಯಕ್ತಿ ಎಂದು ಪರಿಗಣಿಸಿ ಆಹ್ವಾನ ನೀಡುವರು. ನಿಮ್ಮ ಕೆಲವು ಸಲಹೆ ಮತ್ತು ಸಹಾಯಕ್ಕಾಗಿ ಆತ್ಮೀಯರು, ಸಹೋದ್ಯೋಗಿಗಳು ಕೇಳಬಹುದು. ಮನೆಯಲ್ಲಿ ಶುಭ ಕಾರ್ಯ ಹಾಗೆಯೇ ದೇವತಾ ಕಾರ್ಯವನ್ನು ಮಾಡಲು ಒಪ್ಪಿಗೆ ಸೂಚಿಸುವರು.

ಮೀನ : ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡಿ. ಕೆಲವು ಆಲೋಚನೆಗಳು ನಿಮಗೆ ಕೆಡುಕನ್ನು ಬಯಸಬಹುದು ಎಚ್ಚರವಿರಲಿ. ಇಂದು ಪ್ರಯಾಣದಲ್ಲಿ ಸಂತೋಷ ಹಾಗೂ ಲಗುಬಗೆ ಕಾಣಬಹುದು. ಹಣಕಾಸಿನಲ್ಲಿ ಬರುವ ಎಲ್ಲಾ ಮೂಲಗಳಿಂದ ಲಾಭದಾಯಕವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read