ಬೆಂಗಳೂರು : ಈ ತಿಂಗಳು ಕೂಡ ಹೆಚ್ಚುವರಿ ಅಕ್ಕಿ ಬದಲು ಹಣ ನೀಡುತ್ತೇವೆ ಎಂದು ಸಚಿವ K H ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ ಮಾತನಾಡಿದ ಸಚಿವರು ಈ ತಿಂಗಳು ಕೂಡ ಹೆಚ್ಚುವರಿ ಅಕ್ಕಿ ಬದಲು ಹಣ ನೀಡುತ್ತೇವೆ, ಸೆಪ್ಟೆಂಬರ್ ನಿಂದಲೂ ಹೆಚ್ಚುವರಿ ಅಕ್ಕಿ ವಿತರಣೆ ಮಾಡುವುದಕ್ಕೆ ಆಗಲ್ಲ. ನಮಗೆ ಇನ್ನೂ ಅಕ್ಕಿ ಸರಬರಾಜು ಆಗಿಲ್ಲ. ಸದ್ಯಕ್ಕೆ ಅಕ್ಕಿ ಬದಲು ಹಣ ಹಾಕುವ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ಸ್ಪಷ್ಟನೆ ನೀಡಿದರು.
ಹಣದ ಬದಲಿಗೆ ಹೆಚ್ಚುವರಿ 5 ಕೆಜಿ ಆಂಧ್ರದ ಅಕ್ಕಿ ವಿತರಣೆ
ಅನ್ನಭಾಗ್ಯ ಯೋಜನೆಗೆ ಆಂಧ್ರಪ್ರದೇಶದ ಅಕ್ಕಿ ಬರಲಿದೆ. ಎಫ್.ಸಿ.ಐ. ನಿಗದಿಪಡಿಸಿದ ದರಕ್ಕೆ ಅಕ್ಕಿ ಪೂರೈಕೆ ಮಾಡಲು ಆಂಧ್ರಪ್ರದೇಶ ಸರ್ಕಾರ ಮುಂದೆ ಬಂದಿದೆ.
ಇದರಿಂದಾಗಿ ಅನ್ನ ಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ವಿತರಣೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಈ ಕುರಿತಾಗಿ ಆಹಾರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಅವರೊಂದಿಗೆ ಆಂಧ್ರಪ್ರದೇಶದ ಆಹಾರ ಇಲಾಖೆ ಸಚಿವ ಕಾರುಮುರಿ ವೆಂಕಟನಾಗೇಶ್ವರರಾವ್ ನೇತೃತ್ವದ ನಿಯೋಗ ಚರ್ಚೆ ನಡೆಸಿದೆ. ಬೆಂಗಳೂರಿನಲ್ಲಿ ಉಭಯ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದ್ದು, ಎಫ್ಸಿಐ ನಿಗದಿಪಡಿಸಿದ ದರದಲ್ಲಿ ಅಕ್ಕಿ ಪೂರೈಕೆ ಮಾಡಲು ಅವಕಾಶ ನೀಡುವ ಜೊತೆಗೆ ನಿರ್ದಿಷ್ಟ ಪ್ರಮಾಣವನ್ನು ತಿಳಿಸಬೇಕು. ಆದಷ್ಟು ಬೇಗನೆ ಅನುಮತಿ ನೀಡಿದಲ್ಲಿ ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ನಿಯೋಗ ಹೇಳಿದೆ.