alex Certify ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಪೋಷಕರು ಮಾಡುವ ಈ ತಪ್ಪು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಪೋಷಕರು ಮಾಡುವ ಈ ತಪ್ಪು…..!

ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿನ ಉತ್ತಮ ಭವಿಷ್ಯವನ್ನು ಬಯಸುತ್ತಾರೆ. ಅದಕ್ಕಾಗಿ ಮಗುವಿನ ಪೋಷಣೆಯಲ್ಲಿ ಸರ್ವಪ್ರಯತ್ನ ಮಾಡುತ್ತಾರೆ. ಮಗು ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ ಯಶಸ್ಸನ್ನೇ ಹೆತ್ತವರು ಬಯಸುತ್ತಾರೆ. ಆದರೆ ತಿಳಿದೋ ತಿಳಿಯದೆಯೋ ಹೆತ್ತವರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆ ತಪ್ಪುಗಳು ಯಾವುವು  ಎಂಬುದನ್ನು ತಿಳಿಯೋಣ.

ಮಕ್ಕಳನ್ನು ಹೀಯಾಳಿಸುವುದು

ಪೋಷಕರು ಕೆಲವೊಮ್ಮೆ ತಮ್ಮ ಮಕ್ಕಳನ್ನು ಹೀಯಾಳಿಸುತ್ತಾರೆ. ಅಪಹಾಸ್ಯ ಮಾಡುವುದರಿಂದ ಮಕ್ಕಳನ್ನು ಸುಧಾರಿಸಬಹುದು ಎಂಬುದು ಪೋಷಕರ ಭಾವನೆ. ಆದರೆ ಪೋಷಕರು ನಿಂದಿಸುವುದರಿಂದ ಮಕ್ಕಳ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಮಕ್ಕಳು ಹೆತ್ತವರ ಎದುರು ಮಾತನಾಡಲು ಹೆದರುತ್ತಾರೆ ಮತ್ತು ಹಿಂಜರಿಯುತ್ತಾರೆ.

ಮಕ್ಕಳ ಮೇಲೆ ಕೋಪ ಹೊರ ಹಾಕುವುದು

ಎಷ್ಟೋ ಕೆಲಸದ ಒತ್ತಡ ಅಥವಾ ಇನ್ಯಾವುದೇ ಟೆನ್ಷನ್‌ ಅನ್ನು ಹೆತ್ತವರು ಮಕ್ಕಳ ಮೇಲೆ ವ್ಯಕ್ತಪಡಿಸುತ್ತಾರೆ. ಹತಾಶೆಯನ್ನು ಮಕ್ಕಳನ್ನು ಗದರುವ ಮೂಲಕ ಹೊರಹಾಕುತ್ತಾರೆ. ಅನಗತ್ಯವಾಗಿ ಬೈಯುವ ಅಥವಾ ಹೊಡೆಯುವ ಮೂಲಕ ಕೋಪವನ್ನು ಹೊರಹಾಕುತ್ತಾರೆ. ಇದು ಮಕ್ಕಳ ಕೆಟ್ಟ ಪರಿಣಾಮ ಬೀರುತ್ತದೆ.

ಘರ್ಷಣೆಗಳಲ್ಲಿ ಮಕ್ಕಳನ್ನು ಭಾಗಿಯಾಗಿಸುವುದು

ಅನೇಕ ಬಾರಿ ಪೋಷಕರು ತಮ್ಮ ಜಗಳ, ವಿವಾದಗಳಲ್ಲಿ ಮಕ್ಕಳನ್ನೂ ಸೇರಿಸಿಕೊಳ್ಳುತ್ತಾರೆ. ಈ ಜಗಳಗಳು ಪತಿ – ಪತ್ನಿಯರ ನಡುವೆ ಇರಲಿ ಅಥವಾ ಕುಟುಂಬದ ಯಾವುದೇ ಸದಸ್ಯರ ನಡುವೆ ಇರಲಿ, ಅದರಲ್ಲಿ ಮಕ್ಕಳನ್ನು ತೊಡಗಿಸುವುದು ತುಂಬಾ ತಪ್ಪು. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕೆಟ್ಟ ಪದಗಳನ್ನು ಬಳಸಬಾರದು. ಈ ಸಂಘರ್ಷಗಳಿಂದ ಮಕ್ಕಳನ್ನು ದೂರವಿಡಬೇಕು.

ಮಗುವನ್ನು ಕೀಟಲೆ ಮಾಡುವುದು

ಪೋಷಕರು ತಮ್ಮ ಮಕ್ಕಳನ್ನು ತಪ್ಪು ಹೆಸರುಗಳಿಂದ ಸಂಬೋಧಿಸುತ್ತಾರೆ. ಅನೇಕ ಬಾರಿ ಇದು ವಿಪರೀತಕ್ಕೆ ಹೋಗುತ್ತದೆ. ಈ ವಿಷಯಗಳು ಮಕ್ಕಳ ಮೇಲೆ ಆಳವಾದ ನಕಾರಾತ್ಮಕ ಪರಿಣಾಮ ಬೀರುತ್ತವೆ. ಮಕ್ಕಳ ಮನಸ್ಸಿನಲ್ಲಿ ಕಿರಿಕಿರಿ ಶುರುವಾಗುತ್ತದೆ. ಆದ್ದರಿಂದ  ಮಕ್ಕಳನ್ನು ಅವರ ಹೆಸರಿನಿಂದ ಮಾತ್ರ ಸಂಬೋಧಿಸಿ. ಅವರ ನ್ಯೂನತೆಗಳನ್ನು ಎತ್ತಿಹಿಡಿಯುವಂತೆ ಕರೆಯಬೇಡಿ.

ಇತರ ಮಕ್ಕಳೊಂದಿಗೆ ಹೋಲಿಸುವುದು

ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸುವುದು ತುಂಬಾ ಸಾಮಾನ್ಯವಾದ ಸಂಗತಿ. ಇದನ್ನು ಮಾಡುವುದು ಸಂಪೂರ್ಣವಾಗಿ ತಪ್ಪಲ್ಲ, ಆರೋಗ್ಯಕರ ರೀತಿಯಲ್ಲಿ ಮಾಡಿದರೆ ಅದು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಅಪಹಾಸ್ಯ ಮಾಡಿದಂತೆ ಪದೇ ಪದೇ ಇತರರೊಂದಿಗೆ ಹೋಲಿಸುವುದು ತಪ್ಪು. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರತಿಯೊಂದು ಮಗುವು ತನ್ನದೇ ಆದ ರೀತಿಯಲ್ಲಿ ವಿಭಿನ್ನವಾಗಿರುತ್ತದೆ.

ಮಕ್ಕಳ ಬಗ್ಗೆ ಭವಿಷ್ಯ ಹೇಳಬೇಡಿ

ಅನೇಕ ಬಾರಿ ಮಕ್ಕಳು ತಪ್ಪು ಮಾಡಿದಾಗ ಪೋಷಕರು ಮಕ್ಕಳ ಬಗ್ಗೆ ತಪ್ಪು ಭವಿಷ್ಯ ಹೇಳಲು ಪ್ರಾರಂಭಿಸುತ್ತಾರೆ. ಅವರ ಉದ್ದೇಶ ಮಕ್ಕಳ ಭವಿಷ್ಯವನ್ನು ಹಾಳು ಮಾಡುವುದಲ್ಲ. ಆದರೂ ಈ ಸಣ್ಣ ವಿಷಯಗಳು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆತ್ಮಸ್ಥೈರ್ಯ ಕುಂಠಿತವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...