ಅಲ್ಸರ್ ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆಯಾಗಿ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಆದ್ದರಿಂದ ಆರಂಭಿಕ ಹಂತದಲ್ಲಿ ಮನೆಯಲ್ಲಿ ಸುಲಭವಾಗಿ ಸಿಗುವ ಹಣ್ಣು ತರಕಾರಿಗಳ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು.
* ಕೆನೆ ರಹಿತ ಸಕ್ಕರೆ ಇಲ್ಲದ ತಂಪಾದ ಹಾಲಿನ ಸೇವನೆಯು ನೋವನ್ನು ಕಡಿಮೆ ಮಾಡುವುದಲ್ಲದೆ ಅಲ್ಸರ್ ನ ತೀವ್ರತೆಯನ್ನು ಕಮ್ಮಿ ಮಾಡುತ್ತದೆ.
* ಮೇಕೆಯ ಹಾಲು ಅಲ್ಸರ್ ಗುಣ ಪಡಿಸುವಲ್ಲಿ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ.
* ಎಲೆಕೋಸಿನ ರಸ ಅಥವಾ ಕ್ಯಾರೆಟ್ ರಸದ ಸೇವನೆ ಅಲ್ಸರ್ ಅನ್ನು ಗುಣಪಡಿಸುತ್ತದೆ.
* ಕ್ಯಾರೆಟ್ ರಸಕ್ಕೆ ಬೀಟ್ರೂಟ್ ಅಥವಾ ಸೌತೆಕಾಯಿ ರಸವನ್ನು ಸೇರಿಸಿ ಕುಡಿಯಬಹುದು.
* ಹೊಟ್ಟೆ ನೋವಿನ ಸಂದರ್ಭದಲ್ಲಿ ಹೊಟ್ಟೆಗೆ ಬಿಸಿ ನೀರಿನ ಪಟ್ಟಿಯನ್ನು ಹಾಕಬೇಕು. ಬಿಸಿಯ ಉಷ್ಣಾಂಶವು 120 ಡಿಗ್ರಿ ಫ್ಯಾರನ್ ಹೀಟ್ ಇರಬೇಕು.
* ಬಾದಾಮಿ ಬೀಜಗಳನ್ನು ನೆನೆಸಿಟ್ಟು ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ, ಹಿಂಡಿ ತೆಗೆದ ಬಾದಾಮಿ ಹಾಲು ಕುಡಿಯಬೇಕು.
* ಬಾಳೆಹಣ್ಣಿನ ನಿಯಮಿತ ಸೇವನೆ ಅಲ್ಸರ್ ಗಾಯ ಗುಣವಾಗಲು ನೆರವಾಗುತ್ತದೆ.