ಎಲ್ಲೋ ಹೊರಡುವ ಆತುರ ಹೆಚ್ಚಿರುತ್ತೆ. ಅಥವಾ ಈ ಬ್ಯಾಚುಲರ್ಸ್ಗೆ ಅಡುಗೆ ಮನೆಯಲ್ಲಿ ಹೆಚ್ಚು ಕಾಲ ಕಳೆಯೋದು ಇಷ್ಟವಿರೋದಿಲ್ಲ. ಇಂತಹ ಸಂದರ್ಭದಲ್ಲಿ ಯಾರಿಗೇ ಆದರೂ ಐದೇ ನಿಮಿಷದಲ್ಲಿ ತಯಾರಾಗುವಂತಹ ಯಾವುದಾದರೂ ಖಾದ್ಯ ಇದ್ದಿದ್ದರೆ ಎಂದು ಎನಿಸದೇ ಇರದು. ಈ ರೀತಿ ಯೋಚನೆ ಮಾಡುವವರ ಪೈಕಿ ನೀವು ಒಬ್ಬರಾಗಿದ್ದರೆ ಈ ರೆಸಿಪಿ ನಿಮಗಾಗಿ.
ಬೇಕಾಗುವ ಸಾಮಗ್ರಿ : ಆಲೂಗಡ್ಡೆ – 5, ಈರುಳ್ಳಿ – 2, ಟೊಮ್ಯಾಟೋ – 1, ಹಸಿಮೆಣಸಿನಕಾಯಿ – 4, ಕೊತ್ತಂಬರಿ ಸೊಪ್ಪು – 1/4 ಕಪ್, ಕರಿಬೇವು – 1ಎಸಳು, ಬೆಳ್ಳುಳ್ಳಿ – 2 ದಳ, ಎಣ್ಣೆ – 1 ಚಮಚ, ಸಾಸಿವೆ – ಸ್ವಲ್ಪ, ಗರಂ ಮಸಾಲಾ – 1/2 ಚಮಚ,ಅರಿಶಿಣ – 1/4 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟುಕೊಳ್ಳಿ. ಇದಕ್ಕೆ ಮೊದಲು ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ಬಳಿಕ ಸಾಸಿವೆಯನ್ನು ಹಾಕಿ ಅದು ಚಿಟಪಟ ಸದ್ದು ಬರುವವರೆಗೂ ಹುರಿಯಿರಿ.
ಈಗ ಇದಕ್ಕೆ ಸಣ್ಣಗೆ ಹೆಚ್ಚಿಕೊಂಡಿದ್ದ ಈರುಳ್ಳಿಯನ್ನು ಹಾಕಿ ಕೂಡಲೇ ಅರಿಶಿಣವನ್ನೂ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿಕೊಳ್ಳಿ. ಇದಾದ ಬಳಿಕ ಸಣ್ಣಗೆ ಹೆಚ್ಚಿದ ಟೊಮ್ಯಾಟೋ, ಉದ್ದವಾಗಿ ಕತ್ತರಿಸಿದ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು ಎಲ್ಲವನ್ನು ಹಾಕಿ. ಈ ಮಿಶ್ರಣಕ್ಕೆ ಗರಂ ಮಸಾಲವನ್ನೂ ಹಾಕಿಕೊಳ್ಳಿ.
ಇದರಲ್ಲಿ ಆಲೂಗಡ್ಡೆಯನ್ನು ಹಾಕಿ ಬೇಯಲು ಬಿಡಿ . ಒಮ್ಮೆ ಆಲೂಗಡ್ಡೆ ಸಂಪೂರ್ಣವಾಗಿ ಬೆಂದರೆ ರುಚಿಕರವಾದ ಆಲೂ ಪಲ್ಯ ಸವಿಯಲು ಸಿದ್ಧ.