ದಂಪತಿ ಸಂಗ್ರಹಿಸಿದ 32 ಸಾವಿರಕ್ಕೂ ಅಧಿಕ ಪುಸ್ತಕ: ಫೋಟೋ​ ವೈರಲ್​

ನೀವು ದೊಡ್ಡ ಪುಸ್ತಕದ ಹುಳುವಾಗಿದ್ದರೆ ಈ ಪೋಸ್ಟ್ ನಿಮಗಾಗಿ. ದಂಪತಿಯೊಬ್ಬರ ಲೈಬ್ರರಿಯ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ? ಇದು ಇವರ ವೈಯಕ್ತಿಕ ಗ್ರಂಥಾಲಯವಾಗಿದ್ದು, ಇದರಲ್ಲಿ 32 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ.

ಈಗ ವೈರಲ್ ಆಗಿರುವ ಪೋಸ್ಟ್ ಅನ್ನು ಕ್ಯಾಥ್ಲೀನ್ ಓ’ನೀಲ್ ಗೇರ್ ಎಂಬ ಬಳಕೆದಾರರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್​ನಲ್ಲಿ ಇವರು ತಮ್ಮ ಮತ್ತು ಪತಿಯ ವೈಯಕ್ತಿಕ ಲೈಬ್ರರಿಯ ಚಿತ್ರಗಳನ್ನು ಶೇರ್​ ಮಾಡಿದ್ದಾರೆ.

ಬೃಹತ್ ಗ್ರಂಥಾಲಯವು 32,000 ಪುಸ್ತಕಗಳನ್ನು ಹೊಂದಿದ್ದು, ಎಲ್ಲವನ್ನೂ ಮರದ ರ್ಯಾಕ್ ಮೇಲೆ ಅಂದವಾಗಿ ಜೋಡಿಸಲಾಗಿದೆ. “ಇದು ನಮ್ಮ ವೈಯಕ್ತಿಕ ಗ್ರಂಥಾಲಯ. ಇದರಲ್ಲಿ ಸುಮಾರು 32 ಸಾವಿರ ಪುಸ್ತಕಗಳು ಇವೆ. ಇತರ ಜನರು ಕಾರು ಸೇರಿದಂತೆ ಐಷಾರಾಮಿ ವಸ್ತುಗಳನ್ನು ಖರೀದಿಸಿದರೆ ನಾವು ಪುಸ್ತಕ ಖರೀದಿಸಿದ್ದೇವೆ” ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ.

ಈ ಪೋಸ್ಟ್ 53 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿದ್ದು, ದಂಪತಿಯ ಕಾರ್ಯಕ್ಕೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://twitter.com/GearBooks/status/1618322117145026566?ref_src=twsrc%5Etfw%7Ctwcamp%5Etweetembed%7Ctwterm%5E1618322117145026566%7Ctwgr%5E419b87141da2d1d5421a34f541444eca0d808043%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-couples-personal-library-with-32000-books-is-every-bibliophiles-dream-see-viral-pic-2327527-2023-01-28

https://twitter.com/acweyand/status/1618789944490881025?ref_src=twsrc%5Etfw%7Ctwcamp%5Etweetembed%7Ctwterm%5E1618789944490881025%7Ctwgr%5E419b87141da2d1d5421a34f541444eca0d808043%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-couples-personal-library-with-32000-books-is-every-bibliophiles-dream-see-viral-pic-2327527-2023-01-28

https://twitter.com/matthewsardo/status/1618728949928042502?ref_src=twsrc%5Etfw%7Ctwcamp%5Etweetembed%

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read