1-10-100-1000-2000 ರೂಪಾಯಿ ನೋಟುಗಳ ಮ್ಯೂಸಿಯಂ: ಗರಿಗರಿ ನೋಟಾಗಿದ್ದರೂ ಇವುಗಳಿಗಿಲ್ಲ ಬೆಲೆ….!

ಫರ್ಜಿ’ ಇದು ನಟ ಶಾಹಿದ್ ಕಪೂರ್ ನಟನೆಯ ಸೂಪರ್ ಹಿಟ್ ವೆಬ್‌ ಸೀರಿಸ್. ಈ ವೆಬ್ ಸೀರಿಸ್‌ನಲ್ಲಿ ಖೋಟಾ ನೋಟನ್ನ ಹೇಗ್ಹೇಗೆ ಪ್ರಿಂಟ್ ಮಾಡುತ್ತಾರೆ. ಅದು ಎಷ್ಟು ಸವಾಲಿನ ಕೆಲಸ ಅನ್ನುವುದನ್ನ ತೋರಿಸಲಾಗಿದೆ. ಡುಪ್ಲಿಕೇಟ್ ನೋಟು ಪ್ರಿಂಟ್ ಮಾಡುವುದೇ ಅಪರಾಧ. ಈ ಅಪರಾಧ ಜಗತ್ತನ್ನೇ ‘ಫರ್ಜಿ’ಯಲ್ಲಿ ಅನಾವರಣ ಮಾಡಲಾಗಿದೆ.

ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲದೇ ಇರುವ ವಿಚಾರ ಏನೆಂದ್ರೆ, ಸರ್ಕಾರ ಮುದ್ರಣ ಮಾಡುವ ನೋಟುಗಳಲ್ಲಿಯೂ ಅನೇಕ ತಪ್ಪಾಗಿರುತ್ತೆ. ಕೆಲ ನೋಟುಗಳನ್ನ ಸರ್ಕಾರವೇ ಚಲಾವಣೆಗೆ ತಡೆಹಿಡಿಯುತ್ತೆ. ಅಂತಹ ದೋಷಪೂರಿತ ನೋಟುಗಳ ಸಂಗ್ರಹ ಮಾಡುವ ಅಭ್ಯಾಸ ಉಮಾಶಂಕರ್‌ ಅನ್ನೊ ವ್ಯಕ್ತಿ ರೂಢಿಸಿಕೊಂಡಿದ್ದಾರೆ.

ನೀವು ಯಾವತ್ತಾದ್ರೂ ನಕಲಿ ನೋಟನ್ನ ನೋಡಿದ್ದೀರಾ‌ ? ಅಸಲಿಗೂ ನಕಲಿ ನೋಟುಗಳಿಗೂ ತುಂಬಾ ವ್ಯತ್ಯಾಸಗಳಿರುತ್ತೆ. ವಿನ್ಯಾಸದಲ್ಲಿ ಚಿಕ್ಕಪುಟ್ಟ ದೋಷಗಳು ತುಂಬಾ ಇರುತ್ತೆ. ಅಂತಹ ದೋಷಗಳಿರುವ ನೋಟನ್ನ ಮಧ್ಯಪ್ರದೇಶದ ಸಾತ್ನಾದ ವಾಪಾರಿಯೊಬ್ಬರು ಸಂಗ್ರಹಿಸಿದ್ದಾರೆ.

ಅವರ ಮನೆ ಭಾರತೀಯ ಕರೆನ್ಸಿಗಳ ಮ್ಯೂಸಿಯಂ ರೂಪ ತಾಳಿದಂತಿದೆ. ಉಮಾಶಂಕರ್‌ ಅಗರ್ವಾಲ್ ಅನ್ನೊ ವ್ಯಕ್ತಿ 1 ರಿಂದ 2 ಸಾವಿರವರೆಗಿನ ಮುಖಬೆಲೆಯ ವಿವಿಧ ಮುಖಬೆಲೆಯ ನೋಟುಗಳನ್ನ ಸಂಗ್ರಹಿಸಿದ್ದಾರೆ. ಅವುಗಳ ಮೌಲ್ಯ ಸುಮಾರು ಲಕ್ಷಕ್ಕೂ ಮೀರಿದೆ ಎಂದು ಹೇಳಲಾಗುತ್ತಿದೆ. ಬಾಲ್ಯದಿಂದಲೂ ಇವರು ಈ ಅಭ್ಯಾಸ ರೂಢಿಯಾಗಿದ್ದು ಆ ಒಂದೊಂದು ನೋಟುಗಳು ವಿಶೇಷತೆ ಏನೇನು ಅನ್ನುವುದನ್ನೂ ಬರೆದಿಟ್ಟಿದ್ದಾರೆ.

ಇವರು ಸಂಗ್ರಹಿಸಲಾಗಿರುವ ಈ ನೋಟುಗಳೆಲ್ಲವೂ ಅಸಲಿ ನೋಟುಗಳಾಗಿದ್ದು, ಇವುಗಳು ಮುದ್ರಣ ದೋಷ, ಸಂಖ್ಯೆಗಳ ಏರುಪೇರು, ಅಂಚುಗಳು ತಪ್ಪಾಗಿ ಕತ್ತರಿಸಿರುವುದರಿಂದ ತಿರಸ್ಕಾರ ಆಗಿರುವ ನೋಟು ಹಾಗೂ ಶಾಹಿಯಲ್ಲಿ ಹೆಚ್ಚು ಕಡಿಮೆ ಆಗಿರುವಂತಹ ನೋಟು ಇವು. ಬಿಡುವಿನ ಸಮಯದಲ್ಲಿ ಈ ರೀತಿಯ ದೋಷದಿಂದ ಕೂಡಿದ ನೋಟುಗಳನ್ನ ಹುಡುಕುವುದೇ ಇವರ ಕೆಲಸವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read