ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಭರಾಟೆ ಜೋರಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಬೆಲೆಯಲ್ಲಿನ ನಿರಂತರ ಹೆಚ್ಚಳ ಕೂಡ ಇದಕ್ಕೆ ಕಾರಣ. ಈಗ ಕಾರು ಖರೀದಿಸಲು ಬಯಸುವ ಪ್ರತಿಯೊಬ್ಬರೂ ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಎಲೆಕ್ಟ್ರಿಕ್ ಕಾರುಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಕೈಗೆಟುಕುವ ದರದಲ್ಲಿರುವ ದೇಶದ ಟಾಪ್ 5 ಎಲೆಕ್ಟ್ರಿಕ್ ಕಾರುಗಳು ಯಾವುವು ಅನ್ನೋದನ್ನು ನೋಡೋಣ.
ಭಾರತದ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
ಹುಂಡೈ ಕೋನಾ ಎಲೆಕ್ಟ್ರಿಕ್ ಕಾರ್ – ಹುಂಡೈ ಕೋನಾ ಎಲೆಕ್ಟ್ರಿಕ್ ಕಾರು 39.2kWh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು ಕೇವಲ 57 ನಿಮಿಷಗಳಲ್ಲಿ ಅಂದರೆ ಸುಮಾರು ಒಂದು ಗಂಟೆಯಲ್ಲಿ ಶೇ.80 ರಷ್ಟು ಚಾರ್ಜ್ ಆಗುತ್ತದೆ. ಸುಮಾರು 6 ಗಂಟೆಗಳಲ್ಲಿ ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 452 ಕಿಮೀವರೆಗೆ ಓಡಬಲ್ಲದು. ಈ ಕಾರಿನ ಆರಂಭಿಕ ಬೆಲೆ ಸುಮಾರು 24 ಲಕ್ಷ ರೂಪಾಯಿ.
ಟಾಟಾ ನೆಕ್ಸನ್ ಇವಿ – ಟಾಟಾ ನೆಕ್ಸಾನ್ ಇವಿ ಕೂಡ ಉತ್ತಮ ಆಯ್ಕೆಗಳಲ್ಲೊಂದು. ಇದು 141 HP ಪವರ್ ಬ್ಯಾಟರಿಯನ್ನು ಹೊಂದಿದೆ. 250 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 312 ಕಿಮೀ ದೂರವನ್ನು ಕ್ರಮಿಸುತ್ತದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ಸುಮಾರು 15 ಲಕ್ಷ ರೂಪಾಯಿ.
ಟಾಟಾ ಟಿಯಾಗೊ ಇವಿ – ಟಾಟಾ ಟಿಯಾಗೊ ಇವಿ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 250 ಕಿ.ಮೀ ನಿಂದ 315 ಕಿ.ಮೀ ಓಡಬಹುದು. ಹೋಮ್ ಚಾರ್ಜಿಂಗ್ ಜೊತೆಗೆ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಈ ಕಾರಿನಲ್ಲಿ ನೀಡಲಾಗಿದೆ. ಈ ಕಾರಿನ ಬ್ಯಾಟರಿಯನ್ನು ಕೇವಲ 57 ನಿಮಿಷಗಳಲ್ಲಿ 80 ಪ್ರತಿಶತದವರೆಗೆ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 8.49 ಲಕ್ಷ ರೂಪಾಯಿ.
ಮಹೀಂದ್ರ XUV400 – ಮಹೀಂದ್ರ XUV400 ನಲ್ಲಿ ನೀಡಲಾದ ಬ್ಯಾಟರಿಯು 310Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು 34.5kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸುಮಾರು 375 ಕಿಮೀ ದೂರವನ್ನು ಕ್ರಮಿಸುತ್ತದೆ. ಆದರೆ ಎರಡನೇ ಬ್ಯಾಟರಿಯೊಂದಿಗೆ 456 ಕಿಮೀ ದೂರದವರೆಗೆ ಚಲಿಸಬಲ್ಲದು. ಭಾರತದ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಲ್ಲಿ ಇದು ಕೂಡ ಒಂದು. ಆರಂಭಿಕ ಬೆಲೆ 15.99 ಲಕ್ಷ ರೂಪಾಯಿ ಇದೆ.
MG ZS EV – MG ZS EV 176 PS ಮತ್ತು 280 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು 50.3kWh ನ ಹೆಚ್ಚಿನ ವೋಲ್ಟೇಜ್ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯ ಸಾಮರ್ಥ್ಯವು ಒಂದು ಗಂಟೆಯಲ್ಲಿ 80 ಪ್ರತಿಶತದವರೆಗೆ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಈ ಕಾರು 461 ಕಿ.ಮೀ ಓಡುತ್ತದೆ. ಈ ಕಾರಿನ ಆರಂಭಿಕ ಬೆಲೆ ಸುಮಾರು 22.98 ಲಕ್ಷ ರೂಪಾಯಿ ಇದೆ.