ಯಾವುದೇ ದೇಶವಾದರೂ ಅಷ್ಟೇ. ಅಲ್ಲಿನ ಜನಪ್ರಿಯ ಆಟಕ್ಕೆ ಹುಚ್ಚು ಅಭಿಮಾನಿಗಳು ಇದ್ದೇ ಇರುತ್ತಾರೆ. ಐರೋಪ್ಯ ದೇಶಗಳಲ್ಲಿ ಫುಟ್ಬಾಲ್ ಆಟವನ್ನು ಒಂದು ಎಮೋಷನ್‌ನಂತೆ ಫಾಲೋ ಮಾಡುವ ಅಭಿಮಾನಿಗಳು ತಂತಮ್ಮ ಕ್ಲಬ್/ರಾಷ್ಟ್ರದ ತಂಡಗಳು ಆಟದಲ್ಲಿ ಗೆದ್ದಾಗ/ಸೋತಾಗ ಭಾವುಕರಾಗುತ್ತಾರೆ.
ಅದೇ ರೀತಿ ಭಾರತದಲ್ಲಿ ಕ್ರಿಕೆಟ್ ಒಂದು ಪರ್ಯಾಯ ಧರ್ಮವಾಗಿಬಿಟ್ಟಿದೆ. ಟೀಂ ಇಂಡಿಯಾ ವಿಶ್ವಕಪ್‌ನಂಥ ಟೂರ್ನಿಗಳಲ್ಲಿ ಗೆದ್ದಾಗ/ಸೋತಾಗ ಅಭಿಮಾನಿಗಳ ಭಾವನೆಗಳ ಕಟ್ಟೆಯೊಡೆದಾಗ ಏನೆಲ್ಲಾ ಮಾಡುತ್ತಾರೆ ಎಂದು ಅನೇಕ ವಿಡಿಯೋಗಳನ್ನು ನೋಡಿದ್ದೇವೆ.
ಐಪಿಎಲ್ ಟೂರ್ನಿಯ ವೇಳೆ ತಂತಮ್ಮ ಮೆಚ್ಚಿನ ತಂಡಗಳ ವಿಚಾರದಲ್ಲೂ ಸಹ ಅಭಿಮಾನಿಗಳು ಇದೇ ರೀತಿ ಭಾವುಕರಾಗಿ ಬೆಂಬಲ ನೀಡುತ್ತಾರೆ.
ಸೋಮವಾರ ನಡೆದ ಐಪಿಎಲ್ 2023 ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಪಡೆದ ವೇಳೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ದೂರದ ವೆಲ್ಲೂರು ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಯೊಬ್ಬ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುತ್ತಲೇ ಆತನ ಅಭಿಮಾನದ ಕಟ್ಟೆಯೊಡೆದು ಸಂಭ್ರಮಿಸಿದ ಬಗೆಯನ್ನು ಆತನ ಸ್ನೇಹಿತರು ವಿಡಿಯೋ ಮಾಡಿಕೊಂಡು ಶೇರ್ ಮಾಡಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ಅದೀಗ ಭಾರೀ ವೈರಲ್ ಆಗಿದೆ.
https://twitter.com/swatic12/status/1663485813064081409?ref_src=twsrc%5Etfw%7Ctwcamp%5Etweetembed%7Ctwterm%5E1663485813064081409%