ನರಹುಲಿ ಸಮಸ್ಯೆಯಿಂದ ಬಳಲದವರು ಬಲು ಕಡಿಮೆ. ಸೌಂದರ್ಯವನ್ನು ಹಾಳು ಮಾಡಲೆಂದೇ ಮೂಡುವ ಈ ಚಿಕ್ಕ ಮಾಂಸದ ಗಂಟುಗಳನ್ನು ದೂರ ಮಾಡಲು ಒಂದಷ್ಟು ಟಿಪ್ಸ್ ಗಳು ಇಲ್ಲಿವೆ.
ಹೆಚ್ಚಾಗಿ ಕುತ್ತಿಗೆ ಭಾಗದಲ್ಲಿ ಮೂಡುವ ನರಹುಲಿ ಸಮಸ್ಯೆ ಹೋಗಲಾಡಿಸಲು ನಿಮ್ಮ ಮನೆಯ ಮಕ್ಕಳು ಬಳಸುವ ಚಾಕ್ ಪೀಸ್ ಸಾಕು. ಇದನ್ನು ಪುಡಿ ಮಾಡಿ ನರಹುಲಿಗಳ ಮೇಲೆ ಹಚ್ಚಿ. ರಾತ್ರಿ ಮಲಗುವ ಮುನ್ನ ಹಚ್ಚಿ ಇದಕ್ಕೆ ಪ್ಲಾಸ್ಟರ್ ಹಾಕಿ. ಎದ್ದ ಬಳಿಕ ಅದನ್ನು ತೆಗೆಯಿರಿ. ಸತತ ಹದಿನೈದು ದಿನ ಹೀಗೆ ಮಾಡಿದರೆ ನರಹುಲಿ ಬಿದ್ದು ಹೋಗುವುದು ಖಚಿತ.
ಈರುಳ್ಳಿ ರಸಕ್ಕೆ ಒಂದು ಚಮಚ ತೆಂಗಿನೆಣ್ಣೆ ಹಾಕಿ ನರಹುಲಿ ಇರುವೆಡೆ ಹಚ್ಚಿ ಹತ್ತು ನಿಮಿಷ ಬಿಟ್ಟು ಮತ್ತೆ ಹಚ್ಚಿ, ಹೀಗೆ ನಾಲ್ಕೈದು ಬಾರಿ ಹಚ್ಚಿದ ಬಳಿಕ ಒಂದು ಗಂಟೆ ಹೊತ್ತು ಬಿಡಿ. ನಿರಂತರವಾಗಿ ಒಂದು ವಾರ ಹೀಗೆ ಮಾಡಿದರೆ ನರಹುಲಿ ಹಾಗೂ ಕುತ್ತಿಗೆಯ ಟ್ಯಾನ್ ಇಲ್ಲವಾಗುತ್ತದೆ.
3 ಬೆಳ್ಳುಳ್ಳಿ ಜಜ್ಜಿ ಪೇಸ್ಟ್ ತಯಾರಿಸಿ ಅ ಜಾಗಕ್ಕಿಟ್ಟು ಪ್ಲಾಸ್ಟರ್ ಅಂಟಿಸಿ ಮಲಗಿ, ಮರುದಿನ ತೆಗೆಯಿರಿ. ಬಾಳೆಹಣ್ಣು ಸಿಪ್ಪೆಯನ್ನು ಇದೇ ವಿಧಾನದಲ್ಲಿ ಪ್ರಯತ್ನಿಸಿ. ಅಡುಗೆ ಸೋಡಾವನ್ನು ಹರಳೆಣ್ಣೆಯಲ್ಲಿ ಮಿಶ್ರ ಮಾಡಿ ನರಹುಲಿಯಿದ್ದಲ್ಲಿ ಹಚ್ಚುತ್ತಾ ಬಂದರೂ ಅದು ಉದುರಿ ಹೋಗುತ್ತದೆ.