alex Certify ʼಟೊಮೆಟೊʼ ಸೇವಿಸುವುದರಿಂದ ಇದೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಟೊಮೆಟೊʼ ಸೇವಿಸುವುದರಿಂದ ಇದೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ

ಟೊಮೆಟೊ ಹಣ್ಣು ಹಾಗು ತರಕಾರಿಯಾಗಿ ಬಳಕೆಯಾಗುವ ಏಕೈಕ ಪ್ರಬೇಧ. ಹಾಗಾಗಿ ಇದರಲ್ಲಿ ಹಣ್ಣಿನ ಹಾಗೂ ತರಕಾರಿಯ ಪೌಷ್ಟಿಕಾಂಶಗಳು ಹೇರಳವಾಗಿವೆ. ದಿನನಿತ್ಯ ಇದನ್ನು ಅಡುಗೆಯಲ್ಲಿ ಬಳಸುವುದರಿಂದ ಸಾಕಷ್ಟು ಪ್ರಮಾಣದ ವಿಟಮಿನ್ ಅನ್ನು ಪಡೆಯಬಹುದು.

ಟೊಮೆಟೊ ಹಣ್ಣಿನಲ್ಲಿರುವ ಕೆಲವು ಅಂಶಗಳು ಹೃದಯಾಘಾತವನ್ನು ತಡೆಯುವ ಗುಣವನ್ನು ಹೊಂದಿದೆ. ದಿನನಿತ್ಯ ಇದನ್ನು ಸೇವಿಸುವುದರಿಂದ ಕ್ಯಾನ್ಸರ್ ನಂತಹ ಮಹಾಮಾರಿಯನ್ನು ತಡೆಗಟ್ಟಬಹುದು ಎಂಬುದನ್ನು ಕೆಲವು ಸಂಶೋಧನೆಗಳು ದೃಢಪಡಿಸಿವೆ.

ನಿತ್ಯದ ಊಟದಲ್ಲಿ ಟೊಮೆಟೊ ಸೂಪ್ ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ ಅಲ್ಲದೆ ಇದು ಮಲಬದ್ಧತೆಯನ್ನು ತಡೆಯುತ್ತದೆ. ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಲು ಇದು ಸಹಕಾರಿ. ಊಟಕ್ಕಿಂತ ಮೊದಲು ಸೂಪ್ ಸೇವಿಸುವುದರಿಂದ ಕಡಿಮೆ ಪ್ರಮಾಣದ ಆಹಾರ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳಬಹುದು ಹಾಗೂ ದೇಹ ತೂಕವನ್ನು ನಿಯಂತ್ರಿಸಬಹುದು.

ಪ್ಲೇಟ್ಲೇಟ್ ಕೌಂಟ್ ಗಳನ್ನು ಸಾಮಾನ್ಯ ಪ್ರಮಾಣಕ್ಕಿಳಿಸುವ ಇವು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಹೃದಯಸಂಬಂಧಿ ಸಮಸ್ಯೆಗಳಿರುವವರಿಗೆ ಟೊಮೆಟೊ ಹಣ್ಣು ಅತ್ಯುತ್ತಮ ಪರಿಹಾರವನ್ನು ನೀಡುತ್ತದೆ.

ಮೂಳೆಗಳನ್ನು ಬಲಗೊಳಿಸುವ ವಿಟಮಿನ್ ಕೆ ಶಕ್ತಿಯೂ ಟೊಮೆಟೊದಲ್ಲಿದೆ. ಇದು ಮೂಳೆಗಳು ಶಿಥಿಲವಾಗದಂತೆ ತಡೆಯುತ್ತದೆ ಮಾತ್ರವಲ್ಲ ಗಟ್ಟಿಯಾಗಿ ಉಳಿಯುವಂತೆ ನೋಡಿಕೊಳ್ಳುತ್ತದೆ. ನಿಮ್ಮ ತ್ವಚೆಯ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸುವ ಟೊಮೆಟೊವನ್ನು ಪ್ರತಿ ನಿತ್ಯ ಬಳಸಿ ಹಾಗೂ ಆಕರ್ಷಕವಾಗಿ ಕಾಣಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...