
ಶಿಕ್ಷಕರ ಬೇಕಾಬಿಟ್ಟಿ ವರ್ಗಾವಣೆಯಿಂದ ಗ್ರಾಮೀಣ ಪ್ರದೇಶದ ಹಲವಾರು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ವರ್ಗಾವಣೆಯೊಂದೆ ಸರ್ಕಾರದ ಕೆಲಸ ಎಂದು ಭಾವಿಸಿರುವ #ATMSarkara ವು ನಡೆಸಿರುವ ಅವೈಜ್ಞಾನಿಕ ವರ್ಗಾವಣೆ ಬಡ ಮಕ್ಕಳ ಶೈಕ್ಷಣಿಕ ಜೀವನವನ್ನೇ ದುಸ್ತರಗೊಳಿಸಿದೆ. ಶಿಕ್ಷಕರ ಬೇಕಾಬಿಟ್ಟಿ ವರ್ಗಾವಣೆ ಪರಿಣಾಮದಿಂದ ಗ್ರಾಮೀಣ ಪ್ರದೇಶದ ಹಲವಾರು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ.
ಅತ್ತ ಬಿಸಿಯೂಟಕ್ಕೆ ಅಗತ್ಯ ಸಾಮಗ್ರಿಗಳನ್ನು ಒದಗಿಸದೇ, ಇತ್ತ ಪಾಠ ಮಾಡಲು ಶಾಲೆಗೆ ಶಿಕ್ಷಕರನ್ನು ನೇಮಿಸದೇ, ರಾಜ್ಯದ ಮಕ್ಕಳ ಜೀವನದ ಜೊತೆ ತುಘಲಕ್ ಸರ್ಕಾರ ಭಂಡಾಟವಾಡುತ್ತಿದೆ ಎಂದು ಕಿಡಿಕಾರಿದೆ.