ರಿಶ್ ಹಿರೇಮಠ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಬರ್ಗೆಟ್ ಬಸ್ಯಾ’ ಚಿತ್ರದ ಟೀಸರ್ ಇಂದು ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ.
ಈ ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ಹೊಸ ಕಲಾವಿದರ ಈ ಪ್ರಯತ್ನಕ್ಕೆ ಸಾಕಷ್ಟು ಮೆಚ್ಚುಗೆ ದೊರೆತಿದೆ.
ಈ ಚಿತ್ರದಲ್ಲಿ ರಿಶ್ ಹಿರೇಮಠ ಸೇರಿದಂತೆ ಸಂಗೀತಾ ಎನ್ ಸ್ವಾಮಿ, ರಘುವರ್ಯ, ಮಹೇಶ್ ಕುಮಾರ್ ಆದೋನಿ, ಪುನೀತ್ ಚಂದ್ರ ಬಣ್ಣ ಹಚ್ಚಿದ್ದು, ಯರ್ರಾಮ್ ರೆಡ್ಡಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಾಗಾರ್ಜುನ ರೆಡ್ಡಿ ನಿರ್ಮಾಣ ಮಾಡಿದ್ದಾರೆ.
ಮಲ್ಲಿಕಾರ್ಜುನ ಕೆ, ಆನಂದ್ ಶೆಟ್ಟಿ, ರಾಖಿರಾಜ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಸಿದ್ದು ದಳವಾಯಿ ಸಂಕಲನ, ಹಾಗೂ ಶಾಮ್ ಸಾಲ್ವಿನ್ ಛಾಯಾಗ್ರಹಣವಿದೆ. ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜನೆ ನೀಡಿದ್ದಾರೆ.