ಶಂಕರ್ ನಿರ್ದೇಶನದ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಗೇಮ್ ಚೇಂಜರ್’ ಚಿತ್ರ ಈಗಾಗಲೇ ತನ್ನ ಹಾಡುಗಳಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ವರ್ಷ ಬಿಡುಗಡೆಗೆ ಸಜ್ಜಾಗಿದೆ.
ಲಕ್ನೋದಲ್ಲಿ ಇದೇ ನವೆಂಬರ್ 9ರಂದು ಟೀಸರ್ ಲಾಂಚ್ ಇವೆಂಟ್ ಕಾರ್ಯಕ್ರಮ ನೆರವೇರಿಸುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಟೀಸರ್ ವೀಕ್ಷಿಸಲು ರಾಮ್ ಚರಣ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈ ಚಿತ್ರದಲ್ಲಿ ರಾಮ್ ಚರಣ್ ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದು, ಅಂಜಲಿ, ಸಮುದ್ರಕಣಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಸುನಿಲ್ ತೆರೆ ಹಂಚಿಕೊಂಡಿದ್ದಾರೆ.
ಸಮೀರ್ ಮಹಮ್ಮದ್ ಸಂಕಲನ, ಎಸ್ ತಿರುನಾವುಕ್ಕರಸು ಛಾಯಾಗ್ರಹಣ, ಸಾಯಿ ಮಾಧವ್ ಬುರ್ರಾ ಸಂಭಾಷಣೆ, ಹಾಗೂ ಅಂಬರೀವ್ ಅವರ ಸಾಹಸ ನಿರ್ದೇಶನವಿದೆ. ಥಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದು, ರಾಜು ಶಿರೀಷ್ ನಿರ್ಮಾಣ ಮಾಡಿದ್ದಾರೆ.