ಮಾವಿನಕಾಯಿ ಹೆಸರು ಕೇಳಿದರೇನೇ ಬಾಯಿ ಚಪ್ಪರಿಸುತ್ತೇವೆ. ಅಷ್ಟು ರುಚಿ ರುಚಿಯಾಗಿರುತ್ತದೆ ಇದರಲ್ಲಿ ತಯಾರಿಸುವ ಪ್ರತಿ ಖಾದ್ಯ.
ಈಗ ಬಿಸಿಲಿನ ಧಗೆ ಹೆಚ್ಚಾಗಿರುವ ಕಾರಣ ಮಾವಿನಕಾಯಿಯ ಶರ್ಬತ್ ಮಾಡುವುದು ಹೇಗೆ ಅಂತ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು
ತುರಿದ ಮಾವಿನಕಾಯಿ 1/2 ಕಪ್
ಪುದೀನಾ ಸ್ವಲ್ಪ
ಸಕ್ಕರೆ 1/2 ಕಪ್
ನಿಂಬೆ ರಸ ಸ್ವಲ್ಪ
ಐಸ್ ಕ್ಯೂಬ್ಸ್ 3-4
ನೀರು.
ಮಾಡುವ ವಿಧಾನ
ಮೊದಲು ಮಿಕ್ಸಿ ಜಾರಿಗೆ ತುರಿದ ಮಾವಿನಕಾಯಿ, ಪುದೀನಾ, ಸಕ್ಕರೆ, ನಿಂಬೆರಸ, ಐಸ್ ಕ್ಯೂಬ್ ಬೇಕಾದಷ್ಟು ನೀರು ಹಾಕಿ ರುಬ್ಬಿಕೊಳ್ಳಬೇಕು.
ಶರಬತ್ ಸ್ವಲ್ಪ ಗಟ್ಟಿ ಎನಿಸಿದರೆ ಇನ್ನಷ್ಟು ನೀರು ಬೆರೆಸಿ ಮತ್ತೆ ರುಬ್ಬಿಕೊಳ್ಳಬೇಕು.
ನುಣ್ಣಗೆ ರುಬ್ಬಿದ ನಂತರ ಶರಬತ್ತನ್ನು ಸೋಸಿಕೊಳ್ಳಬೇಕು. ಬಳಿಕ ಜ್ಯೂಸ್ ಗ್ಲಾಸ್ ಗೆ ಟೇಸ್ಟಿ ಟೇಸ್ಟಿ ಮಾವಿನಕಾಯಿ ಶರಬತ್ ಹಾಕಿ ರುಚಿ ನೋಡಲು ಕೊಡಿ.