
ಈ ಚಿತ್ರವನ್ನು ಭುವನ್ ಮೂವೀಸ್ ಲಾಂಛನದಲ್ಲಿ ಸುರೇಶ್ ಹಾಗೂ ನಾಗರಾಜ್ ನಿರ್ಮಾಣ ಮಾಡಿದ್ದು, ವಿಕ್ಕಿ ವರುಣ್ ಸೇರಿದಂತೆ ಧನ್ಯ ರಾಮ್‌ಕುಮಾರ್, ನಾಗಾಭರಣ, ಅಚ್ಯುತ್ ಕುಮಾರ್, ಸಂಪತ್ , ರಾಜೇಶ್ ನಟರಂಗ, ಗಲ್ಲಿ ನಟ, ಬಸು ಹಿರೇಮಠ, ಕಾಂತರಾಜ್ ಕಡ್ಡಿಪುಡಿ ಬಣ್ಣ ಹಚ್ಚಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ರಾಜೇಶ್ ಎನ್. ವೇಷ ಭೂಷಣ, ವಿಕ್ರಮ್ ಮೋರ್ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ, ಸಂದೀಪ್ ಕುಮಾರ್ ಛಾಯಾಗ್ರಹಣವಿದೆ.