‘ಜಿಗರ್’ ನಲ್ಲಿ ಮಾಸ್ ಹೀರೋ ಆಗಿ ಮಿಂಚಿದ್ದ ಪ್ರವೀಣ್ ತೇಜ್ ಇದೀಗ ‘ಜಂಬೂ ಸರ್ಕಸ್’ ಚಿತ್ರದ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇದರ ಲಿರಿಕಲ್ ಹಾಡೊಂದು ಇದೇ ಆಗಸ್ಟ್ 17ಕ್ಕೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರದಲ್ಲಿ ಪ್ರವೀಣ್ ತೇಜ್ ಹಾಗೂ ಅಂಜಲಿ ಅನೀಶ್ ಪ್ರಮುಖ ಪಾತ್ರದಲ್ಲಿದ್ದು, ಅವಿನಾಶ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಆಶಾಲತಾ, ಸ್ವಾತಿ, ಲಕ್ಷ್ಮಿ ಸಿದ್ದಯ್ಯ, ನಯನಾ, ಜಗಪ್ಪ, ಉಳಿದ ಪಾತ್ರವರ್ಗದಲ್ಲಿದ್ದಾರೆ. ಶ್ರೀ ಮಹತಿ ಕಂಬೈನ್ಸ್ ಬ್ಯಾನರ್ ನಲ್ಲಿ ಎಚ್ ಸಿ ಸುರೇಶ್ ನಿರ್ಮಾಣ ಮಾಡಿದ್ದು, ಜ್ಞಾನೇಶ್ ಮಾತಾಡ್ ಸಂಕಲನ, ಏ ವಿ ಕೃಷ್ಣಕುಮಾರ್ ಛಾಯಾಗ್ರಾಹಣ, ರಘು ನಿಡವಳ್ಳಿ ಸಂಭಾಷಣೆ ಹಾಗೂ ಎ ಹರ್ಷ ನೃತ್ಯ ನಿರ್ದೇಶನವಿದೆ.
https://twitter.com/A2MusicSouth/status/1823699349588623477