![](https://kannadadunia.com/wp-content/uploads/2024/02/29f51084-1862-4f94-a488-b6f57b336317-1-1024x572.jpg)
ಗಂಗಾಧರ್ ಸಾಲಿಮಠ್ ನಿರ್ದೇಶನದ ವಿಜಯ್ ರಾಘವೇಂದ್ರ ಅಭಿನಯದ ಬಹು ನಿರೀಕ್ಷಿತ ‘ಗ್ರೇ ಗೇಮ್ಸ್’ ಚಿತ್ರದ ‘ಪರವಶ’ ಎಂಬ ಲಿರಿಕಲ್ ಸಾಂಗ್ ನಿನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಪಂಚಮ್ ಜೀವ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಅತ್ರಾಂಗಿ ಫುಂಕಾರ್ ಸಂಗೀತ ಸಂಯೋಜನೆ ನೀಡಿದ್ದು, ಕಿರಣ್ ಕಾವೇರಪ್ಪ ಸಾಹಿತ್ಯವಿದೆ.
ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಸೇರಿದಂತೆ ಶ್ರುತಿ ಪ್ರಕಾಶ್, ಭಾವನಾ ರಾವ್, ಅಪರ್ಣ, ರವಿ ಭಟ್ ತೆರೆ ಹಂಚಿಕೊಂಡಿದ್ದು, ಆನಂದ್ ಎಚ್. ಮುಗುದ್ ನಿರ್ಮಾಣ ಮಾಡಿದ್ದಾರೆ. ಡೋಲೇಶ್ವರ್ ರಾಜ್ ಸುಂಕು, ಅರವಿಂದ್ ಜೋಶಿ ಮತ್ತು ಸತೀಶ್ ಗ್ರಾಮ ಪುರೋಹಿತ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಜಗದೀಶ್ ಎನ್ ಸಂಕಲನ ಮತ್ತು ವರುಣ್ ಡಿ.ಕೆ ಛಾಯಾಗ್ರಹಣವಿದೆ. ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗಿದೆ.