
ಹಾಡುಗಾರ್ತಿಯೊಬ್ಬರಿಗೆ ಲೈಂಗಿಕ ಕಿರುಕುಳ ಕೊಟ್ಟ ಆಪಾದನೆ ಮೇಲೆ ನವಿ ಮುಂಬೈನ ಬಾರ್ ಒಂದರ ನಿರ್ವಾಹಕನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಯಾವುದೇ ಬಂಧನವಾಗಿಲ್ಲ. ಮೇ 20ರ ಬೆಳಗ್ಗಿನ ಜಾವದಲ್ಲಿ ಬಾರ್ ಮ್ಯಾನೇಜರ್ ಸುದರ್ಶನ್ ಶೆಟ್ಟಿ ಹಾಗೂ 27 ವರ್ಷ ವಯಸ್ಸಿನ ಹಾಡುಗಾತಿಯ ನಡುವೆ ಜಗಳ ನಡೆದಿದೆ.
ಈ ವೇಳೆ ಶೆಟ್ಟಿ ತಮಗೆ ಕಿರುಕುಳ ಕೊಟ್ಟಿದ್ದು ತಮ್ಮ ಮುಖಕ್ಕೆ ಗುದ್ದಿ ತಮ್ಮನ್ನು ಶೋಷಣೆಗೆ ಒಳಪಡಿಸಿದ್ದು, ಬಾರ್‌ನಿಂದ ಹೊರಗಟ್ಟಿದ್ದಾರೆ ಎಂದು ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಆಕೆ ತಿಳಿಸಿದ್ದಾರೆ.
ಮಹಿಳೆಯ ನಮ್ರತೆಗೆ ಭಂಗ ತರುವುದು (ಐಪಿಸಿ ಸೆಕ್ಷನ್ 354), ಅಪಾಯಕಾರಿ ಶಸ್ತ್ರಗಳ ಬಳಸಿ ಗಾಯಗೊಳಿಸುವುದು (324), ಉತ್ತೇಜನಗೊಳಿಸುವ ದೃಷ್ಟಿಯಲ್ಲಿ ಒಬ್ಬರಿಗೆ ಅವಮಾನಿಸುವುದು (504) ಹಾಗೂ ಕ್ರಿಮಿನಲ್ ಉದ್ದೇಶಗಳು (506) ಅಡಿ ಬಾರ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಾಗಿದೆ.