ಬ್ಯಾಂಕ್ ಲಾಕರ್ ನಲ್ಲಿದ್ದ ಹಣ, ಆಸ್ತಿ ಪತ್ರ ಗೆದ್ದಲು ಹುಳು ಪಾಲು; ಬೆಚ್ಚಿಬಿದ್ದ ಗ್ರಾಹಕಿ

ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳು ಮತ್ತು ಆಸ್ತಿ ದಾಖಲೆಗಳನ್ನು ಗೆದ್ದಲುಹುಳುಗಳು ತಿಂದುಹಾಕಿರೋ ಘಟನೆ ರಾಜಸ್ತಾನದಲ್ಲಿ ನಡೆದಿದೆ.

ಉದಯಪುರ ನಗರದ ಕಲಾಜಿ ಗೋರಾಜಿ ಪ್ರದೇಶದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಿಂದ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಲಾಕರ್ ನಲ್ಲಿಟ್ಟಿದ್ದ ಮಹಿಳೆಯೊಬ್ಬರ ಲಕ್ಷ ಲಕ್ಷ ರೂಪಾಯಿ ನೋಟುಗಳು ಹಾಗೂ ಆಸ್ತಿ ದಾಖಲೆಗಳನ್ನು ಗೆದ್ದಲು ತಿಂದು ಹಾಕಿವೆ. ಲಾಕರ್ ನಲ್ಲಿಟ್ಟಿದ್ದ ಎರಡು ಲಕ್ಷ ಹದಿನೈದು ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಗೆದ್ದಲು ತಿಂದು ಹಾಕಿದೆ. ಬ್ಯಾಂಕ್ ಲಾಕರ್ ಸಂಖ್ಯೆ 265 ರ ಮಾಲೀಕರಾದ ಸುನೀತಾ ಮೆಹ್ತಾ ಅವರು ತಮ್ಮ ಲಾಕರ್‌ನಲ್ಲಿದ್ದ ಹಣವನ್ನು ಹಿಂಪಡೆಯಲು ಹೋದಾಗ, ಎಲ್ಲಾ ಹಣವನ್ನು ಗೆದ್ದಲು ಹುಳುಗಳು ತಿಂದು ಹಾಕಿದ್ದವು. ಲಾಕರ್‌ನಲ್ಲಿ ಗೆದ್ದಲು ಕಂಡು ಬ್ಯಾಂಕ್ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.

ಬಟ್ಟೆಯ ಚೀಲದಲ್ಲಿ ಎರಡು ಲಕ್ಷ ರೂಪಾಯಿ, ಚೀಲದ ಹೊರಗೆ 15 ಸಾವಿರ ಇಡಲಾಗಿತ್ತು. ಹಾಳಾದ 15,000 ರೂ.ಗಳನ್ನು ಬ್ಯಾಂಕ್ ಮ್ಯಾನೇಜರ್ ನಿಂದ ಬದಲಾಯಿಸಿಕೊಳ್ಳಲಾಗಿತ್ತು. ಆದರೆ ಸುನೀತಾ ಮನೆಗೆ ಹೋಗಿ ನೋಟು ತುಂಬಿದ ಚೀಲವನ್ನು ತೆರೆದಾಗ ಅದರಲ್ಲಿ ಇರಿಸಲಾಗಿದ್ದ ಎರಡು ಲಕ್ಷ ರೂಪಾಯಿಯ ನೋಟುಗಳಲ್ಲಿ ಗೆದ್ದಲು ಹುಳಗಳು ಕಂಡು ಬಂದಿವೆ.

ಬ್ಯಾಂಕ್ ಆಡಳಿತ ಮಂಡಳಿಯು ಲಾಕರ್ ಸುತ್ತ ಗೆದ್ದಲಿನ ಮದ್ದು ಸಿಂಪಡಿಸಿದೆ. ಲಾಕರ್‌ನ ಹಿಂಬದಿಯಲ್ಲಿ ಗೆದ್ದಲು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಲವು ಗ್ರಾಹಕರು ಬ್ಯಾಂಕ್‌ಗೆ ಆಗಮಿಸಿ ಬ್ಯಾಂಕ್‌ ನೌಕರರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read