ಮುಂಬೈ: ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹೋಲುವ ಪ್ರತಿಮೆಯನ್ನು ನವೆಂಬರ್ 1ರಂದು ಮುಂಬೈನ ವಾಂಖೆಡೆಯಲ್ಲಿ ಅನಾವರಣಗೊಳಿಸಲಾಯಿತು. ಇದೀಗ ಈ ಪ್ರತಿಮೆ ನೋಡಿದ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಮೆಮೆ ಶುರು ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತೆಂಡೂಲ್ಕರ್ ಅವರ ಭವ್ಯವಾದ ಕಂಚಿನ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಿದ್ರು. ಅಹಮದ್‌ನಗರ ಮೂಲದ ಶಿಲ್ಪಿ ಪ್ರಮೋದ ಕಾಂಬಳೆ ಇದನ್ನು ರಚಿಸಿದ್ದು, ಪ್ರತಿಮೆಯು 14 ಅಡಿ ಎತ್ತರವಿದೆ ಎಂದು ಹೇಳಿದ್ದಾರೆ.
ಆದರೆ, ಪ್ರತಿಮೆಯ ಫೋಟೋ ನೋಡಿದ ಅಭಿಮಾನಿಗಳು ಗೊಂದಲಗೊಂಡಿದ್ದಾರೆ. ಸಚಿನ್ ಅವರ ಪ್ರತಿಮೆಯು ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವನ್ ಸ್ಮಿತ್‌ರನ್ನು ಹೋಲುತ್ತಿದೆ ಎಂದು ಅಭಿಮಾನಿಗಳು ಫೋಟೋ ಹಂಚಿಕೊಂಡಿದ್ದಾರೆ.
ಸ್ಟೀವನ್ ಸ್ಮಿತ್ ಅವರ ಫೋಟೋ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯ ಫೋಟೋಗಳು ವೈರಲ್ ಆಗುತ್ತಿವೆ. ಪ್ರತಿಮೆಯು ಸಚಿನ್ ರನ್ನು ಹೋಲುತ್ತಿಲ್ಲ. ಬದಲಾಗಿ ಸ್ಮಿತ್ ರನ್ನು ಹೋಲುತ್ತಿದೆ ಎಂದು ನೆಟ್ಟಿಗರು ಜೋಕ್ ಗಳ ಸುರಿಮಳೆಗೈಯುತ್ತಿದ್ದಾರೆ. ಸದ್ಯ, ಇಂಟರ್ನೆಟ್ ತುಂಬಾ ಮೀಮ್ಸ್ ಹಾವಳಿ ಸೃಷ್ಟಿಯಾಗಿದೆ.