
ಬೆಂಗಳೂರು: ದೇವಾಲಯಕ್ಕೆ ಬಂದಿದ್ದ 7 ವರ್ಷದ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅರ್ಚಕನನ್ನು ವಿದ್ಯಾರಣ್ಯಪುರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ವಿದ್ಯಾರಣ್ಯಪುರ ಸಮೀಪದ ದೇವಾಲಯದ ಅರ್ಚಕ ಪ್ರಕಾಶ್ ಆರಾಧ್ಯ ಬಂಧಿತ ಆರೋಪಿ ಎರಡು ದಿನಗಳ ಹಿಂದೆ ಅಪ್ರಾಪ್ತ ಅಸಭ್ಯವಾಗಿ ವರ್ತಿಸಿದ್ದ ಬಗ್ಗೆ ಪೋಷಕರು ದೂರು ನೀಡಿದ್ದರು. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಅನೇಕ ದಿನಗಳಿಂದ ನಗರದಲ್ಲಿ ಬೀದರ್ ಜಿಲ್ಲೆಯ ಬಾಲಕಿಯ ಪೋಷಕರು ನೆಲೆಸಿದ್ದಾರೆ. ಮನೆ ಸಮೀಪದ ದೇವಾಲಯಕ್ಕೆ ಬಾಲಕಿ ತೆರಳಿದ್ದಾಗ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.