ಬೆಂಗಳೂರು : ಜನರೆಂದರೆ ಮಾರು ದೂರ ಓಡುವ ಪ್ರಧಾನಿ ಮೋದಿಗೆ ಮೊದಲು ಜನತಾ ದರ್ಶನ ಮಾಡಲು ಹೇಳಿ’ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ‘ಜನರೆಂದರೆ ಮಾರು ದೂರ ಓಡುವ ಪ್ರಧಾನಿ ಮೋದಿಗೆ ಮೊದಲು ಜನತಾ ದರ್ಶನ ಮಾಡಲು ಹೇಳಿ.ಅದು ಸಾಧ್ಯವಿಲ್ಲ ಎಂದಾದರೆ ಕನಿಷ್ಠ ಪಕ್ಷ “ಪತ್ರಕರ್ತರ ದರ್ಶನ”ವನ್ನದರೂ ಮಾಡಲು ಹೇಳಿ.ಕೇವಲ ಕ್ಯಾಮರಾ ದರ್ಶನ ಮಾಡುವುದರಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ.
ಈ ಹತ್ತು ವರ್ಷಗಳಲ್ಲಿ ಒಂದೂ ಪತ್ರಿಕಾಗೋಷ್ಠಿ ನಡೆಸಲಾಗದ, ಜನಸಾಮಾನ್ಯರ ದರ್ಶನ ಮಾಡಿ ಕಷ್ಟ ನಷ್ಟ ಆಲಿಸದ ಪ್ರಧಾನಿ ಬಗ್ಗೆ ಅಶೋಕ್ ಮಾತಾಡಲಿ. ಜನತಾ ದರ್ಶನವಿರಲಿ, ಸಿಎಂ ಆಗಿದ್ದಾಗ BSY, ಬೊಮ್ಮಾಯಿಯವರಿಗೆ ದರ್ಶನ ಕೊಡದ ಪ್ರಧಾನಿ ಬಗ್ಗೆ ಮಾತಾಡಲಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
