ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ವ್ಯಕ್ತಿಗೆ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಸಮಯಪ್ರಜ್ಞೆಯಿಂದ ಸಿಪಿಆರ್ ಮಾಡಿ ಆತನ ಪ್ರಾಣ ಉಳಿಸಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ. ಗೋಡೆಯಿಂದ ಬಿದ್ದ ವ್ಯಕ್ತಿಯ ಜೀವವನ್ನು ಉಳಿಸಲು ತಕ್ಷಣ CPR ಮಾಡಿ ಆತನ ಹೃದಯ ಬಡಿತ ನಿಲ್ಲದಂತೆ ನೋಡಿಕೊಳ್ಳಲಾಗಿದೆ. ಹೃದಯ ಸ್ತಂಭನದಿಂದ ವ್ಯಕ್ತಿ ಕುಸಿದುಬಿದ್ದಿದ್ದಾರೆ.
ಈ ವೇಳೆ ಅಲ್ಲಿ ನೆರೆದಿದ್ದ ಜನ ಆತ ಪ್ರಾಣ ಕಳೆದುಕೊಂಡಿದ್ದಾನೆಂದು ಭಾವಿಸಿ ಸುತ್ತಲೂ ಸೇರಿದ್ದರು. ಆದಾಗ್ಯೂ, ಪೊಲೀಸ್ ಅಧಿಕಾರಿ ಘಟನಾ ಸ್ಥಳಕ್ಕೆ ಬಂದಾಗ ತಕ್ಷಣವೇ ವ್ಯಕ್ತಿಗೆ ಸಿಪಿಆರ್ ಮಾಡಲು ಪ್ರಾರಂಭಿಸಿದರು. ಶೀಘ್ರದಲ್ಲೇ, ಮನುಷ್ಯನ ಹೃದಯ ಮತ್ತೆ ಬಡಿಯಲು ಪ್ರಾರಂಭಿಸಿತು.
ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ಜೊತೆಗೆ ವ್ಯಕ್ತಿ ಕುಸಿದುಬಿದ್ದಾಗ ಆತನ ನೆರವಿಗೆ ಬಾರದೆ ನಿಂತ ಜನರ ಬಗ್ಗೆ ಮತ್ತು ಪೊಲೀಸ್ ಅಧಿಕಾರಿ ಸಹಾಯ ಮಾಡುತ್ತಿದ್ದ ವೇಳೆ ಮಾತನಾಡುತ್ತಾ ವಿಡಿಯೋ ಮಾಡಿದವರ ಬಗ್ಗೆಯೂ ಭಾರೀ ಟೀಕೆ ವ್ಯಕ್ತವಾಗಿದೆ.