ಆಘಾತಕಾರಿ ಘಟನೆ ಒಂದರಲ್ಲಿ ಅಪ್ರಾಪ್ತೆ ತನ್ನೊಂದಿಗೆ ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ 47 ವರ್ಷದ ವ್ಯಕ್ತಿಯೊಬ್ಬ ಆಕೆಗೆ ಮನಬಂದಂತೆ ಇರಿದು ನಡು ರಸ್ತೆಯಲ್ಲೇ ಕೂದಲಿಡಿದು ಎಳೆದೊಯ್ಯುವ ಮೂಲಕ ಪೈಶಾಚಿಕತೆ ಮೆರೆದಿದ್ದಾನೆ.
ಛತ್ತೀಸ್ಗಡದ ರಾಯ್ ಪುರದಲ್ಲಿ ಈ ಘಟನೆ ನಡೆದಿದ್ದು, 16 ವರ್ಷದ ಈ ಬಾಲಕಿ ಆರೋಪಿ ಓಂಕಾರ್ ತಿವಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಈತ ಆಕೆಯ ಮುಂದೆ ಮದುವೆಯ ಪ್ರಸ್ತಾವನೆ ಇರಿಸಿದ್ದು ಬಾಲಕಿಯ ಕುಟುಂಬಸ್ಥರನ್ನೂ ಸಂಪರ್ಕಿಸಿದ್ದಾನೆ.
ಇದಕ್ಕೆ ನಿರಾಕರಿಸಿದ ಕುಟುಂಬಸ್ಥರು ಬಾಲಕಿಗೆ ಕೆಲಸ ಬಿಟ್ಟು ಬರುವಂತೆ ಹೇಳಿದ್ದಾರೆ. ಯಾವಾಗ ಬಾಲಕಿ ಕೆಲಸ ಬಿಡುವ ತನ್ನ ನಿರ್ಧಾರವನ್ನು ತಿಳಿಸಿದಳೋ ಸಿಟ್ಟಿಗೆದ್ದ ಆತ ಆಕೆಗೆ ಚಾಕುವಿನಿಂದ ಇರಿದಿದ್ದಾನೆ.
ನಂತರ ಬಾಲಕಿಯ ತಲೆಗೂದಲು ಹಿಡಿದು ರಸ್ತೆ ತುಂಬಾ ಎಳೆದೊಯ್ದಿದ್ದಾನೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಅಲ್ಲಿದ್ದರೂ ಸಹ ಯಾರೂ ಕೂಡ ನೆರವಿಗೆ ಧಾವಿಸಿಲ್ಲ. ಕ್ರೂರ ಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
https://twitter.com/yogitabhayana/status/1627286317469155329?ref_src=twsrc%5Etfw%7Ctwcamp%5Etweetembed%7Ctwterm%5E1627286317469155329%7Ctwgr%5E80cea4b52b0f6b0324a985a0edfacc6ede4b3f48%7Ctwcon%5Es1_&ref_url=https%3A%2F%2Fwww.news18.com%2Fnews%2Findia%2Fteen-girl-stabbed-dragged-by-hair-on-busy-street-over-rejecting-47-year-old-mans-marriage-proposal-police-7121881.html