
ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷಿತ ‘ಮೇಘ’ ಚಿತ್ರದ ಟೀಸರ್ ಇಂದು ಸಂಜೆ ಆರು ಗಂಟೆಗೆ a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ಚರಣ್ ನಿರ್ದೇಶಸಿದ್ದು, ಕೃಷಿ ಪ್ರೊಡಕ್ಷನ್ ಬ್ಯಾನರ್ ನಡಿ ಯತೀಶ್ ಬಂಡವಾಳ ಹೂಡಿದ್ದಾರೆ. ಕಿರಣ್ ರಾಜ್ ಸೇರಿದಂತೆ ಕಾಜಲ್ ಕುಂದಾರ್, ರಾಜೇಶ್ ನಟರಂಗ, ಸಂಗೀತ, ಶೋಭ ರಾಜ್, ವಿದ್ಯಾ ಶಾಸ್ತ್ರಿ, ಸುಂದರ್ ವೀಣಾ, ಗಿರೀಶ್ ರಾಜಾಹುಲಿ, ನಾಗಮಂಗಲ ಜೈರಾಮ್, ಮತ್ತು ಹನುಮಂತಗೌಡ ಬಣ್ಣ ಹಚ್ಚಿದ್ದಾರೆ, ಗೌತಮ್ ನಾಯಕ್ ಅವರ ಸಂಕಲನ ಮತ್ತು ಛಾಯಾಗ್ರಹಣವಿದೆ. ಜೋಯಲ್ ಸಖಾರಿ ಸಂಗೀತ ಸಂಯೋಜನೆ ನೀಡಿದ್ದಾರೆ.
