alex Certify ಚಹಾ ಅಥವಾ ಕಾಫಿ ಚಳಿಗಾಲದಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಹಾ ಅಥವಾ ಕಾಫಿ ಚಳಿಗಾಲದಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ಉಪಯುಕ್ತ ಮಾಹಿತಿ

ಮೈಕೊರೆವ ಚಳಿಯಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿ ಹೀರಲು ಎಲ್ಲರೂ ಇಷ್ಟಪಡುತ್ತಾರೆ. ಶೇ.95 ರಷ್ಟು ಭಾರತೀಯರ ಬೆಳಗು ಪ್ರಾರಂಭವಾಗುವುದು ಚಹಾ ಮತ್ತು ಕಾಫಿಯೊಂದಿಗೆ. ಸಂಜೆ ಆಯಾಸವನ್ನು ಹೋಗಲಾಡಿಸಿ ರಿಲ್ಯಾಕ್ಸ್‌ ಆಗಲು ಅನೇಕರು ಟೀ, ಕಾಫಿ ಕುಡಿಯುತ್ತಾರೆ. ಆದರೆ ಚಳಿಗಾಲದಲ್ಲಿ ಚಹಾ ಅಥವಾ ಕಾಫಿ ಇವೆರಡರಲ್ಲಿ ಯಾವುದು ಬೆಸ್ಟ್ ?‌ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಬೇಕು.

ಎರಡಕ್ಕೂ ಹೋಲಿಕೆ ಮಾಡಿದರೆ ಕಾಫಿಯಲ್ಲಿ ಹೆಚ್ಚು ನಿಕೋಟಿನ್ ಮತ್ತು ಕೆಫೀನ್ ಇರುತ್ತದೆ. ಚಹಾದಲ್ಲಿ ಕೆಫೀನ್ ಮತ್ತು ನಿಕೋಟಿನ್ ಪ್ರಮಾಣವು ಕಡಿಮೆ. ಏಕೆಂದರೆ ನಾವು ಅದನ್ನು ಫಿಲ್ಟರ್ ಮಾಡುತ್ತೇವೆ.

ಕೆಫೀನ್ಕೆಫೀನ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದು ಅನೇಕ ರೀತಿಯ ಪಾನೀಯಗಳಲ್ಲಿ ಕಂಡುಬರುತ್ತದೆ. ಚಹಾ ಅಥವಾ ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯುತ್ತೀರಿ ಎಂಬುದು ಬಹಳ ಮುಖ್ಯ. 400 ಗ್ರಾಂ ಕೆಫೀನ್ ಮನುಷ್ಯನಿಗೆ ಆರೋಗ್ಯಕರವಾಗಿದೆ,  ಇದಕ್ಕಿಂತ ಹೆಚ್ಚು ಸೇವನೆ ಮಾಡಿದರೆ ಅಪಾಯ ಖಚಿತ.

ತೂಕ ನಷ್ಟಅನೇಕ ಸಂಶೋಧನೆಗಳ ಪ್ರಕಾರ ಕೆಫೀನ್ 3-13 ಪ್ರತಿಶತ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಕೊಬ್ಬನ್ನು ಸುಡುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಕಾಫಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.

ಉತ್ಕರ್ಷಣ ನಿರೋಧಕಚಹಾ ಮತ್ತು ಕಾಫಿ ಎರಡೂ ಉತ್ಕರ್ಷಣ ನಿರೋಧಕಗಳು. ಇದು ಅನೇಕ ರೀತಿಯ ಹಾನಿಗಳಿಂದ ನಮ್ಮನ್ನು ರಕ್ಷಿಸುತ್ತದೆ. ರೋಗಗಳು ಹರಡುವುದನ್ನು ತಡೆಯುತ್ತದೆ.

ಶಕ್ತಿಯ ಮಟ್ಟ ಹೆಚ್ಚಳ – ಚಹಾದಲ್ಲಿ ಕೆಫೀನ್ ಪ್ರಮಾಣ ಕಡಿಮೆ. ಎಲ್-ಥೈನೈನ್ ಸಮೃದ್ಧವಾಗಿದೆ. ಇದು ನಮ್ಮ ಮೆದುಳಿಗೆ ತುಂಬಾ ಒಳ್ಳೆಯದು. ಚಹಾವನ್ನು ಸೇವಿಸಿದರೆ ಅದರಲ್ಲಿ ಕಂಡುಬರುವ ಎಲ್-ಥೈನೈನ್  ಕೆಫೀನ್‌ನೊಂದಿಗೆ ಸೇರಿ ನಮ್ಮನ್ನು ಎಚ್ಚರವಾಗಿರಿಸುತ್ತದೆ.

ಹಲ್ಲುಗಳ ಮೇಲೆ ಪರಿಣಾಮಚಹಾವು ಹಲ್ಲುಗಳ ಮೇಲೆ ಕಾಫಿಗಿಂತ ಹೆಚ್ಚು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದು ಹಲ್ಲುಗಳ ಬಣ್ಣವನ್ನು ಹಳದಿಯಾಗಿ ಬದಲಾಯಿಸುತ್ತದೆ.

ತಜ್ಞರು ಏನು ಹೇಳುತ್ತಾರೆ ?

ತಜ್ಞರ ಪ್ರಕಾರ ಚಹಾವು ಕಾಫಿಗಿಂತ ಉತ್ತಮ. ಏಕೆಂದರೆ ಇದು ಕಡಿಮೆ ಕೆಫೀನ್ ಅನ್ನು ಹೊಂದಿರುತ್ತದೆ. ಎರಡನ್ನೂ ತಯಾರಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇವುಗಳನ್ನು ಅತಿಯಾಗಿ ಕುದಿಸಿದರೆ ಎಂಟಿಒಕ್ಸಿಡೆಂಟ್‌ಗಳು ಪರಿಣಾಮ ಬೀರುತ್ತವೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದೆಲ್ಲದರ ಹೊರತಾಗಿ ಇದಕ್ಕೆ ಸೇರಿಸುವ ಸಕ್ಕರೆಯ ಪ್ರಮಾಣವು ಬಹಳಷ್ಟು ವ್ಯತ್ಯಾಸವನ್ನುಂಟುಮಾಡುತ್ತದೆ.

ಚಹಾ ಅಥವಾ ಕಾಫಿ ?

ಚಹಾ ಅಥವಾ ಕಾಫಿ, ಇದು ವೈಯಕ್ತಿಕ ಆಯ್ಕೆಯ ವಿಷಯ. ಆದರೆ ಎರಡನ್ನೂ ಅತಿಯಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಇವುಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಒಂದರಿಂದ 2 ಕಪ್ ಕಾಫಿ ಅಥವಾ 1-2 ಕಪ್ ಚಹಾ ಸೇವನೆ ಆರೋಗ್ಯಕರ. ಇದಕ್ಕಿಂತ ಹೆಚ್ಚು ಕುಡಿದರೆ ಅದು ಆರೋಗ್ಯಕ್ಕೆ ಹಾನಿಕರ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...