ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಅಪಾಯ ಹಿನ್ನಲೆ ಭದ್ರತೆ ಹೆಚ್ಚಳ: ಗುಪ್ತಚರ ವರದಿ ನಂತರ ಝಡ್ ಕೆಟಗರಿ ಭದ್ರತೆ

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಣ್ಣಾಮಲೈ ಅವರಿಗೆ ಝಡ್ ಕೆಟಗರಿ ಭದ್ರತೆಯನ್ನು ಗೃಹ ಸಚಿವಾಲಯ ನೀಡಿದೆ. ಅಣ್ಣಾಮಲೈ ಅವರಿಗೆ ಈ ಹಿಂದೆ ವೈ ಕೆಟಗರಿ ಭದ್ರತೆ ಇತ್ತು.

ಸಿಆರ್‌ಪಿಎಫ್‌ನ ಒಟ್ಟು 33 ಕಮಾಂಡೋಗಳು ಅವರಿಗೆ ಈ ಭದ್ರತೆಯನ್ನು ನೀಡಲಿದ್ದಾರೆ. ಅಣ್ಣಾಮಲೈ ಅವರಿಗೆ ಅಪಾಯ ಹೆಚ್ಚಾಗುವ ಆತಂಕದ ಹಿನ್ನೆಲೆಯಲ್ಲಿ ಅವರಿಗೆ ಈ ಭದ್ರತೆ ನೀಡಲಾಗಿದೆ.

ಮಾಜಿ ಐಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಮಾವೋವಾದಿಗಳು ಮತ್ತು ಧಾರ್ಮಿಕ ಉಗ್ರಗಾಮಿಗಳಿಂದ ಬೆದರಿಕೆಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಕುರಿತು ಐಬಿ ವರದಿ ಬಂದ ನಂತರ ಅಣ್ಣಾಮಲೈ ಅವರಿಗೆ ಝಡ್ ಕೆಟಗರಿ ಭದ್ರತೆ ಒದಗಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read