
ಶಾರುಖ್ ಖಾನ್ ಅವರ ಔದಾರ್ಯ ಮತ್ತು ದಯೆ ಎಲ್ಲರಿಗೂ ತಿಳಿದಿರುವ ವಿಷಯ. ನಟಿ ತಾಪ್ಸಿ ಪನ್ನು ಅವರು ಈಗ ಶಾರುಖ್ ಅವರ ಬಗ್ಗೆ ಮಾತನಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ತಾಪ್ಸಿ ಅವರು ಶಾರುಖ್ ಅವರನ್ನು ಅವರ ಬಾಂದ್ರಾ ಮನೆ ‘ಮನ್ನತ್’ ನಲ್ಲಿ ಮೊದಲ ಬಾರಿಗೆ ಭೇಟಿಯಾದ ಸಮಯದ ಬಗ್ಗೆ ಮಾತನಾಡಿದ್ದಾರೆ. SRK ಅವರು ಪ್ರತಿಯೊಬ್ಬರನ್ನು ಹೇಗೆ ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ. ಅಷ್ಟೆಲ್ಲಾ ಮಂದಿ ಸೆಲೆಬ್ರಿಟಿಗಳು ಇದ್ದರೂ ಶಾರುಖ್ ಅವರಿಗೆ ನನ್ನ ಹೆಸರು ಚೆನ್ನಾಗಿ ನೆನಪಿತ್ತು ಎಂದಿದ್ದಾರೆ.
ಈ ವೀಡಿಯೊವನ್ನು ಸೈಯದ್ ಇರ್ಫಾನ್ ಅಹ್ಮದ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದು ‘ದಿ ಲಾಲನ್‌ಟಾಪ್’ ಜೊತೆ ನಟಿ ನಡೆಸಿದ ಸಂವಾದವಾಗಿದೆ. ಶಾರುಖ್ ಅವರು ದೇಶದ ಅತ್ಯುತ್ತಮ ನಟರಲ್ಲಿ ಒಬ್ಬರು ಎಂದು ನಟಿ ಹೇಳಿದ್ದಾರೆ. ಅನೇಕ ಮಂದಿ ಇದಕ್ಕೆ ಕಮೆಂಟ್ಗಳನ್ನು ಹಾಕಿ ಶಾರುಖ್ ಅವರ ಗುಣಗಾನ ಮಾಡಿದ್ದಾರೆ.