ಬೆಂಗಳೂರು: ಗ್ಯಾರಂಟಿ ಯೋಜನೆಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆ ನಡೆಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದು, ಹೊಸ ಮೊಬೈಲ್, 50 ರೂ. ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.
ನಮ್ಮಲ್ಲಿರುವ ಮೊಬೈಲ್ ಗಳು ಹಳೆಯದಾಗಿರುವುದರಿಂದ ಹೊಸ ಮೊಬೈಲ್ ನೀಡಬೇಕು. ಒಂದು ಮನೆಗೆ ಐದು ಗ್ಯಾರಂಟಿಗೆ 10 ರೂ. ನಿಗದಿ ಮಾಡಲಾಗಿದೆ. ಹೆಚ್ಚು ಸಮಯ ಬೇಕಿರುವುದರಿಂದ ಒಂದು ಗ್ಯಾರಂಟಿಗೆ 10 ರೂ. ನಂತೆ 5 ಗ್ಯಾರಂಟಿಗೆ 50 ರೂ. ಕೊಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಅವರು ಗ್ಯಾರಂಟಿ ಯೋಜನೆ ಸಮೀಕ್ಷೆಗೆ ಹೊಸ ಮೊಬೈಲ್ ನೀಡಬೇಕು. ಮನೆಯೊಂದರ ಸಮೀಕ್ಷೆಗೆ ಒಂದು ಗ್ಯಾರಂಟಿಗೆ 10 ರೂಪಾಯಿಯಂತೆ ಐದು ಗ್ಯಾರಂಟಿಗೆ 50 ನೀಡಬೇಕು ಎಂದು ಒತ್ತಾಯಿಸಿದ್ದಾರೆ.