alex Certify ಥೈರಾಯ್ಡ್‌ ಸಮಸ್ಯೆಗೂ ಮದ್ದು ʼಸೂರ್ಯಕಾಂತಿʼ ಬೀಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್‌ ಸಮಸ್ಯೆಗೂ ಮದ್ದು ʼಸೂರ್ಯಕಾಂತಿʼ ಬೀಜ

ಸೂರ್ಯಕಾಂತಿ ಹೂವು ಎಂದೊಡನೆ ತಕ್ಷಣ ನೆನಪಿಗೆ ಬರುವುದು ಸನ್ ಫ್ಲವರ್ ಆಯಿಲ್. ಇದನ್ನು ಎಣ್ಣೆಯ ರೂಪದಲ್ಲಿ ಅಲ್ಲ, ಬದಲಿಗೆ ಬೀಜರೂಪದಲ್ಲಿ ಸೇವಿಸಿದರೆ ಹೆಚ್ಚು ಪ್ರಯೋಜನ ಹೊಂದಬಹುದು.

ಈ ಬೀಜಗಳಲ್ಲಿ ವಿಟಮಿನ್ ಇ, ಪಾಸ್ಪರಸ್, ಸೆಲಿನಿಯಂ ನಂತಹ ಅಪರೂಪದ ವಿಟಮಿನ್ ಖನಿಜಗಳು ಇವೆ. ಇದರಿಂದ ಫ್ಯಾಟಿ ಆಮ್ಲಗಳು, ನಾರಿನಾಂಶ, ಅಮೈನೊ ಆಮ್ಲ, ಬಿ ವಿಟಮಿನ್ ಸಹ ಪುಷ್ಕಳವಾಗಿ ದೊರಕುತ್ತದೆ. ಅವು ಉರಿಯನ್ನು ತಗ್ಗಿಸುವುದರೊಂದಿಗೆ ಅನೇಕ ಕಾಯಿಲೆಗಳನ್ನು ತಡೆಗಟ್ಟುತ್ತದೆ.

ಮುಖ್ಯವಾಗಿ ಇದರಲ್ಲಿನ ಫ್ಯಾಟಿ ಆಮ್ಲಗಳು ಎ, ಡಿ, ಇ, ಕೆ ವಿಟಮಿನ್ ಗಳು ಉತ್ಪತ್ತಿಯಾಗಲು ಸಹಾಯಕ. ಇದರಲ್ಲಿರುವ ವಿಟಮಿನ್ ಇ ಅದ್ಭುತವಾದ ಅಸಿಡಿಟಿ ಆಕ್ಸಿಡೆಂಟ್ ನಂತೆ ಕಾರ್ಯನಿರ್ವಹಿಸುತ್ತದೆ.

* ಸೂರ್ಯಕಾಂತಿ ಬೀಜಗಳು ಆಮ್ಲೀಯ ಒತ್ತಡವನ್ನು ಕಡಿಮೆ ಮಾಡುವುದರ ಮೂಲಕ ಹಾನಿಕಾರಕ ಫ್ರೀ ರಾಡಿಕಲ್ ಬಿಡುಗಡೆಗೆ ಅಡ್ಡಿ ಉಂಟು ಮಾಡುತ್ತದೆ. ಅದರಿಂದಾಗಿ ಹೃದ್ರೋಗದಂತಹ ಸಮಸ್ಯೆ ಬರದಂತಾಗುತ್ತದೆ.

* ಇದರಲ್ಲಿರುವ ಸೆಲಿನಿಯಾ ಥೈರಾಯಿಡ್ ಕಾಯಿಲೆಗಳನ್ನು ತಡೆಗಟ್ಟುತ್ತದೆ.

* ಸೂರ್ಯಕಾಂತಿ ಬೀಜಗಳಲ್ಲಿರುವ ಮೆಗ್ನೇಶಿಯಂ ಬಿಪಿಯನ್ನು ನಿಯಂತ್ರಿಸುವುದರ ಜೊತೆಗೆ ತಲೆನೋವು, ಮಲಬದ್ಧತೆ, ಅಲಸಿಕೆ, ಖಿನ್ನತೆ, ಆತಂಕವನ್ನು ಕಡಿಮೆ ಮಾಡಲು ಸಹಕಾರಿ.

* ಇದರಲ್ಲಿ ಪಾಂಟೋಥನಿಕ್ ಆಮ್ಲ ಹೆಚ್ಚಾಗಿರುತ್ತದೆ. ಇದು ಜೈವಿಕ ಕ್ರಿಯೆಯ ವೇಗಕ್ಕೆ, ಹಾರ್ಮೋನ್ ಸಮತೋಲನಕ್ಕೆ, ಮೆದುಳಿನ ಕಾರ್ಯತತ್ಪರತೆ ಸುಗಮ ಮಾಡಲಿಕ್ಕೆ ಸಹಾಯ ಮಾಡುತ್ತದೆ.

* ಅಷ್ಟೇ ಅಲ್ಲದೆ ಬೀಜಗಳು ಇನ್ಸುಲಿನ್ ತಡೆಗಟ್ಟಲು ಸಹಾಯ ಮಾಡುತ್ತಾ ಮಧುಮೇಹ ಬಾರದಂತೆ ಮಾಡುತ್ತದೆ.

* ಚರ್ಮದ ಆರೋಗ್ಯವನ್ನು ರಕ್ಷಿಸುತ್ತದೆ. ಕೂದಲ ಬೆಳವಣಿಗೆಗೆ ಸಹಕಾರಿ. ಆದ್ದರಿಂದ ಇದನ್ನು ಸಲಾಡ್, ಖಾದ್ಯಗಳಲ್ಲಿ, ಬ್ರೆಡ್, ಕೇಕ್ ಗಳಲ್ಲಿ ಉಪಯೋಗಿಸಲಾಗುತ್ತದೆ. ಇಲ್ಲದಿದ್ದರೆ ಪುಡಿಯ ರೂಪದಲ್ಲಿ ಉಪಯೋಗಿಸುವುದಕ್ಕೆ ಆದ್ಯತೆ ನೀಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...