alex Certify SHOCKING: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ವಿದ್ಯಾರ್ಥಿನಿ ಮೊಬೈಲ್ ಕಸಿದುಕೊಂಡು ಚಾಕುವಿನಿಂದ ಇರಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ವಿದ್ಯಾರ್ಥಿನಿ ಮೊಬೈಲ್ ಕಸಿದುಕೊಂಡು ಚಾಕುವಿನಿಂದ ಇರಿತ

ಬೆಂಗಳೂರು: ವಿದ್ಯಾರ್ಥಿನಿ ಮೊಬೈಲ್ ಕಸಿದುಕೊಂಡು ಚಾಕುವಿನಿಂದ ಇರಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರತಿಷ್ಠಿತ ಕಾಲೇಜಿನ ಎಲ್.ಎಲ್.ಬಿ. ವಿದ್ಯಾರ್ಥಿನಿ ಅಮೃತಾ(19) ಗಾಯಗೊಂಡವರು. ಕೋಡಿಹಳ್ಳಿ ನಿವಾಸಿಯಾಗಿರುವ ಅಮೃತಾ ಹುಲ್ಲಹಳ್ಳಿ ಕಾಲೇಜಿನಲ್ಲಿ ಓದುತ್ತಿದ್ದಾರೆ. ಅಂಗಡಿಯೊಂದರಲ್ಲಿ ಚಾಕೊಲೇಟ್ ಖರೀದಿಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಲು ಮುಂದಾದಾಗ ಆಕೆಯ ಮೊಬೈಲ್ ಕಸಿದುಕೊಂಡ ಆರೋಪಿ ಓಡಿ ಹೋಗಿದ್ದಾನೆ.

ಆತನ ಹಿಂದೆ ಓಡಿದ ಅಮೃತಾ ಕುತ್ತಿಗೆ ಹಿಡಿದುಕೊಂಡಿದ್ದಾಳೆ. ಈ ವೇಳೆ ಆರೋಪಿ ವಿದ್ಯಾರ್ಥಿನಿಯನ್ನು ತಳ್ಳಿ ಮತ್ತೆ ಪರಾರಿಯಾಗಿದ್ದಾನೆ. ಅಮೃತಾ ಕೂಗಿಕೊಂಡಾಗ ಆರೋಪಿ ಚಾಕು ತೆಗೆದು ಅಮೃತಾ ಅವರ ಎಡಗೈಗೆ ಹೊಡೆದಿದ್ದಾನೆ. ರಕ್ತ ಗಾಯವಾಗಿ ಅಮೃತಾ ಅಳುತ್ತಿದ್ದಾಗ ಸಹಚರರೊಂದಿಗೆ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಸ್ಥಳೀಯರು ಅಮೃತಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆರೋಪಿಗಾಗಿ ಶೋಧ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...