ಹೋಟೆಲ್ ರೂಂ ನಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿನಿಯ ರಕ್ಷಣೆ

ಹೈದರಾಬಾದ್: ಕಳೆದ 20 ದಿನಗಳಿಂದ ಹೈದರಾಬಾದ್ ನ ಹೋಟೆಲ್ ನ ರೂಂ ನಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿನಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯನಾದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ, ಭೈಂಸಾ ಪಟ್ಟಣದ ವಿದ್ಯಾರ್ಥಿನಿಯನ್ನು ಹೋಟೆಲ್ ಗೆ ಕರೆದೊಯ್ದು ಆಕೆಯನ್ನು ಹೋಟೆಲ್ ರೂಂ ನಲ್ಲಿಯೇ ಕೂಡಿಹಾಕಿದ್ದ. ಕಳೆದ 20 ದಿನಗಳಿಂದ ವಿದ್ಯಾರ್ಥಿನಿ ಹೋಟೆಲ್ ರೂಂ ನಲ್ಲಿ ಬಂಧಿಯಾಗಿದ್ದಳು.

ವಿದ್ಯಾರ್ಥಿನಿ ಇನ್ ಸ್ಟೆಂಟ್ ಮೆಸೆಜಿಂಗ್ ಆಪ್ ಮೂಲಕ ಪೋಷಕರಿಗೆ ಸಂದೇಶ ರವಾನಿಸಿದ್ದಳು. ತನ್ನನ್ನು ಹೋಟೆಲ್ ರೂಂ ನಲ್ಲಿ ಕೂಡಿಹಾಕಿ ಬೀಗ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಳು. ತಕ್ಷಣ ಆಕೆಯ ಪೋಷಕರು ಹೈದರಾಬಾದ್ ನ SHE ಟೀಂ ಗೆ ಮಾಹಿತಿ ನೀಡಿದ್ದರು. ಅಲ್ಲದೇ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳನ್ನು ಟ್ರ್ಯಾಪ್ ಮಾಡಿ ಹೋಟೆಲ್ ರೂಂ ನಲ್ಲಿ ಬಂಧಿಯನ್ನಾಗಿ ಮಾಡಲಾಗಿದೆ ಎಂದು ದೂರು ನೀಡಿದ್ದರು.

ಕಾರ್ಯಾಚರಣೆ ಕೈಗೊಂಡ ಮಹಿಳಾ ಪೊಲಿಸ್ ತಂಡ (SHE TEAM) ಹೋಟೆಲ್ ನ ಮಾಹಿತಿ ಪಡೆದು ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. 19 ವರ್ಷದ ಆರೋಪಿ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read