4 ವರ್ಷದ ಮಗುವಿನ ಮೇಲೆ ಮಲತಂದೆಯಿಂದ ಚಿತ್ರಹಿಂಸೆ; ಆರೋಪಿಗೆ ಧರ್ಮದೇಟು ನೀಡಿ ಠಾಣೆಗೆ ಒಪ್ಪಿಸಿದ ಸ್ಥಳೀಯರು

ಆನೇಕಲ್: 4 ವರ್ಷದ ಮಗುವಿನ ಮೇಲೆ ಮಲತಂದೆ ಸಿಗರೇಟ್, ವಾಟರ್ ಹೀಟರ್ ನಿಂದ ಸುಟ್ಟು ಅಮಾನುಷವಾಗಿ ನಡೆದುಕೊಂಡು, ಚಿತ್ರಹಿಂಸೆ ನೀಡಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಹೆಬ್ಬಗೂಡಿಯಲ್ಲಿ ನಡೆದಿದೆ.

ದಿಶಾ ಎಂಬ ನಾಲ್ಕು ವರ್ಷದ ಮಗುವಿನ ಮೇಲೆ ಮಲತಂದೆ ಮಂಜುನಾಥ್ ಕ್ರೌರ್ಯ ಮೆರೆದಿದ್ದಾನೆ. ಕುಡಿದು ಬಂದು ಸದಾಕಾಲ ಮಗುವಿಗೆ ಹಿಂಸಿಸುತ್ತಿದ್ದ. ಮಲತಂದೆ ಮಗುವನ್ನು ಹಿಂಸಿಸುತ್ತಿದ್ದರೂ ಹೆತ್ತಮ್ಮ ಈ ಬಗ್ಗೆ ಚಕಾರವೆತ್ತದೇ ಮೌನವಾಗಿದ್ದಳು.

ಪ್ರತಿದಿನ ಮಂಜುನಾಥ್ ಮಗುವನ್ನು ಹೊಡೆಯುವುದು, ಸಿಗರೇಟ್, ವಾಟರ್ ಹೀಟರ್ ನಿಂದ ಸುಡುವುದು, ಕುಕ್ಕರ್ ನಿಂದ ತಲೆಗೆ ಹೊಡೆಯುವುದು ಮಾಡುತ್ತಿದ್ದ. ಮಗುವಿಗೆ ನೀಡುತ್ತಿದ್ದ ಚಿತ್ರಹಿಂಸೆ ನೋಡಿ ರೋಸಿಹೋದ ಸ್ಥಳೀಯರು, ಮಂಜುನಾಥ್ ನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಬಳಿಕ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಮಂಜುನಾಥ್ ಚಿಕ್ಕಬಳ್ಳಾಪುರ ಮೂಲದವನು. ಪತಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಮಂಜುಳಾ ಎಂಬ ಮಹಿಳೆ ಜೊತೆ ವಾಸವಾಗಿದ್ದ. ದುಶ್ಚಟಗಳ ದಾಸನಾಗಿದ್ದ ಮಂಜುನಾಥ್ 4 ವರ್ಷದ ಮಗುವಿಗೆ ರಾತ್ರಿ ಅಂಗಡಿಗೆ ಹೋಗಿ ಸಿಗರೇಟ್, ಸ್ನ್ಯಾಕ್ಸ್ ತರಲು ಹೇಳುತ್ತಿದ್ದ. ಮಗು ಒಪ್ಪದಿದ್ದಾಗ ಮನ ಬಂದತೆ ಹೊಡೆಯುವುದು, ಸಿಗರೇಟ್, ವಾಟರ್ ಹೀಟರ್ ನಿಂದ ಸುಟ್ಟು ಹಿಂಸಿಸುತ್ತಿದ್ದ. ಮಗುವಿನ ಮೇಲೆ ಹಲ್ಲೆ ನಡೆಸುತ್ತಿದ್ದಾಗಲೇ ಮಲತಂದೆಯನ್ನು ಹಿಡಿದ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read