ಬೆಂಗಳೂರು: ಹವಾಮಾನದಲ್ಲಿನ ವ್ಯತ್ಯಾಸದಿಂದ ಮದ್ರಾಸ್ ಐ – ಕಂಜಕ್ಟಿವೈಟಿಸ್ ಕಣ್ಣಿನ ಉರಿಯೂತ ಸೋಂಕು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಸಾವಿರಾರು ಜನರಲ್ಲಿ ಸೋಂಕು ಉಂಟಾಗಿದೆ.
ಕಣ್ಣಿನ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ. ಕಣ್ಣಿನ ಬಿಳಿ ಭಾಗ ಕೆಂಪಾಗುವುದು, ರೆಪ್ಪೆ ಅಂಟಿಕೊಳ್ಳುವುದು, ಉರಿಯೂತ, ನೋವು ಕಾಣಿಸಿಕೊಳ್ಳುತ್ತದೆ. ನೀರು ಸೋರುತ್ತದೆ, ಇಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ಮೊಬೈಲ್, ಟಿವಿ ವೀಕ್ಷಣೆ ಕಡಿಮೆ ಮಾಡಬೇಕು. ಸೋಂಕು ತಗುಲಿದವರು ಹೊರಗೆ ಹೋಗಬಾರದು.
ಬೇರೆಯವರಿಗೆ ಸೋಂಕು ಹರಡದಂತೆ ಎಚ್ಚರ ವಹಿಸಲು ಕನ್ನಡಕ ಧರಿಸಬೇಕು. ವೈದ್ಯರ ಸಲಹೆಯೊಂದಿಗೆ ಔಷಧ ಪಡೆದುಕೊಳ್ಳಬೇಕು. ಜನದಟ್ಟಣೆ ಪ್ರದೇಶಗಳಿಗೆ ಹೋಗಬಾರದು. ಪದೇ ಪದೇ ಕಣ್ಣು ಮುಟ್ಟಬಾರದು. ಸೋಪ್ ನಲ್ಲಿ ಆಗಾಗ ಕೈ ತೊಳೆಯಬೇಕು.