ರಾಜ್ಯದ ಡಿಪ್ಲೊಮಾ, ಪದವೀಧರರೇ ಗಮನಿಸಿ : ‘ಯುವನಿಧಿ’ಗೆ ನೋಂದಣಿ ಮಾಡಲು ಜಸ್ಟ್ ಹೀಗೆ ಮಾಡಿ |Yuvanidhi Scheme

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಐದನೇ ಗ್ಯಾರಂಟಿ ‘ಯುವನಿಧಿ’ಯೋಜನೆ ನೋಂದಣಿ ಇಂದಿನಿಂದ ಆರಂಭವಾಗಿದ್ದು, ಡಿಪ್ಲೊಮಾ ಪಾಸ್ ಆದವರು , ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳು ಪದವೀಧರರಾಗಿ ಉತ್ತೀರ್ಣಗೊಂಡ ನಂತರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವನ್ನು ಕಂಡುಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಅಗತ್ಯ ತಯಾರಿಗೆ ಯುವನಿಧಿ ಯೋಜನೆಯು ವರವಾಗಿದೆ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುವ ದಿನಗಳ ಖರ್ಚು ಸರಿದೂಗಿಸಲು, ಅರ್ಜಿ ಸಲ್ಲಿಕೆಗೆಯ ಶುಲ್ಕ ಭರಿಸಲು, ಉದ್ಯೋಗ ಮಾರ್ಗದರ್ಶಿಗಳನ್ನು ಖರೀದಿಸಲು ಯುವನಿಧಿಯು ಸಹಾಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಯುವನಿಧಿಗೆ ಅರ್ಜಿ ಸಲ್ಲಿಸಲು ಬಯಸುವವರು ಸ್ಕ್ಯಾನ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಯುವನಿಧಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ನೀವು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಗೆ  ಭೇಟಿ ನೀಡಬೇಕಾಗುತ್ತದೆ.

ಯಾರೆಲ್ಲ ಅರ್ಹರು..?

• 2023ರ ಪದವೀಧರರು
• 2023ರಲ್ಲಿ ಡಿಪ್ಲೋಮಾ ಉತ್ತೀರ್ಣರಾದವರು
• ಕನಿಷ್ಠ 6 ತಿಂಗಳವರೆಗಿನ ನಿರುದ್ಯೋಗಿಗಳು
* ಕರ್ನಾಟಕದಲ್ಲಿ ವಾಸವಿರುವವರು
• ಸ್ವಯಂ ಉದ್ಯೋಗ ಹೊಂದಿಲ್ಲದವರು
• ಉನ್ನತ ವಿದ್ಯಾಭ್ಯಾಸ ಮುಂದುವರಿಸದಿರುವವರು

ಅಗತ್ಯ ಪ್ರಮಾಣಪತ್ರಗಳು
• ಪಿಯುಸಿ
• ಪದವಿ/ಡಿಪ್ಲೋಮಾ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read