ಬೆಂಗಳೂರು : 2023-24 ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವ್ಯವಸ್ಥೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಇನ್ಮುಂದೆ ವರ್ಷಕ್ಕೆ 3 ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಎಸ್ ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಶಾಲಾ ಶಿಕ್ಷಣ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಹಾಲಿ ಪರೀಕ್ಷಾ ಪದ್ದತಿಯಲ್ಲಿ ವಿದ್ಯಾರ್ಥಿಗಳಿಗೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆಯನ್ನು ನಡೆಸುತ್ತಿದೆ. ಈ ರೀತಿಯ ಪರೀಕ್ಷೆಯು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಮತ್ತು ಪರೀಕ್ಷಾ ಆತಂಕವನ್ನು ಸೃಷ್ಟಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಜ್ಞಾನದಾರಣೆ, ಅರ್ಥಪೂರ್ಣ ಕಲಿಕೆ, ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ.
ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯು ಗಳಿಸಿದ ಅಂಕಗಳಿಂದ ಪ್ರಪ್ತರಾಗದಿದ್ದರೆ, ವಾರ್ಷಿಕ ಪರೀಕ್ಷೆ ಯಲ್ಲಿ ಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶವಿದೆ. ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೇ ಸರಳ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ವಿದ್ಯಾರ್ಥಿಯ ಅಂತಿಮ ಅಂಕಗಳೆಂದು ಪರಿಗಣಿಸಲಾಗುತ್ತಿದೆ. ಈ ವ್ಯವಸ್ಥೆಯು ವಿದ್ಯಾರ್ಥಿ ಸ್ನೇಹಿಯಾಗಿರುವುದಿಲ್ಲ. ಏಕೆಂದರೆ ಎರಡು ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥ
ಮಂಡಳಿಯ ಸಂಭವನೀಯ ವೇಳಾಪಟ್ಟಿ
`SSLC’ ವಾರ್ಷಿ ಪರೀಕ್ಷೆ ವೇಳಾಪಟ್ಟಿ
ಪರೀಕ್ಷೆ-1 : ಮಾರ್ಚ್ 30 ರಿಂದ ಏಪ್ರೀಲ್ 15 ರವರೆಗೆ ( ಮೇ. 8 ಕ್ಕೆ ಫಲಿತಾಂಶ, ಮೇ.23 ಮೌಲ್ಯಮಾಪನ ಫಲಿತಾಂಶ ಪ್ರಕಟ)
ಪರೀಕ್ಷೆ-2 : ಜೂನ್ 12 ರಿಂದ ಜೂನ್ 19 (ಜೂನ್ 29 ಕ್ಕೆ ಫಲಿತಾಂಶ ಪ್ರಕಟ, ಜುಲೈ 10 ರಂದು ಮರುಮೌಲ್ಯಮಾಪನದ ಫಲಿತಾಂಶ ಪ್ರಕಟ)
ಪರೀಕ್ಷೆ-3 :ಜೂನ್ 29 ರಿಂದ ಆಗಸ್ಟ್ 5 ( ಆಗಸ್ಟ್ 19 ಫಲಿತಾಂಶ ಪ್ರಕಟ, ಆಗಸ್ಟ್ 26 ಮರುಮೌಲ್ಯಮಾಪನ ಫಲಿತಾಂಶ ಪ್ರಕಟ)
ದ್ವಿತೀಯ `PUC’ ಪರೀಕ್ಷೆ ವೇಳಾಪಟ್ಟಿ
ಪರೀಕ್ಷೆ-1 : ಮಾರ್ಚ್ 1 ರಿಂದ ಮಾರ್ಚ್ 25 ( ಏಪ್ರಿಲ್ 22 ಫಲಿತಾಂಶ ಪ್ರಕಟ, ಮೇ. 10 ಮರುಮೌಲ್ಯಮಾಪನ ಫಲಿತಾಂಶ)
ಪರೀಕ್ಷೆ-2 : ಮೇ. 15 ರಿಂದ ಜೂನ್ 25 (ಜೂನ್ 21 ಫಲಿತಾಂಸ ಪ್ರಕಟ, ಜೂನ್ 29 ಮರುಮೌಲ್ಯಮಾಪನದ ಫಲಿತಾಂಶದ ಪ್ರಕಟ)
ಪರೀಕ್ಷೆ -3 : ಜುಲೈ 12 ರಿಂದ ಜುಲೈ 30 (ಆಗಸ್ಟ್ 16 ಕ್ಕೆ ಫಲಿತಾಂಶ ಪ್ರಕಟ, ಮೇ.23 ಮರುಮೌಲ್ಯಮಾಪನದ ಫಲಿತಾಂಶ ಪ್ರಕಟ)