ನವದೆಹಲಿ: ವಾರದಲ್ಲಿ 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಮೊಬೈಲ್ ಫೋನ್ ನಲ್ಲಿ ಮಾತನಾಡಿದರೆ ರಕ್ತದ ಒತ್ತಡ ಹೆಚ್ಚಾಗುವ ಅಪಾಯ ಶೇಕಡ 12ರಷ್ಟಿದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.
ಚೀನಾದ ವೈದ್ಯಕೀಯ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಗೊತ್ತಾಗಿದ್ದು, ಮೊಬೈಲ್ ಬಳಕೆ ಅನಿವಾರ್ಯವಾಗಿರುವಾಗ ಇಂತಹ ವರದಿ ಆತಂಕ ಮೂಡಿಸಿದೆ.
ರಕ್ತದೊತ್ತಡ ಇಲ್ಲದ ಎರಡು 2,12,046 ಮಂದಿಯನ್ನು ಅಧ್ಯಯನದಲ್ಲಿ ಬಳಸಿಕೊಂಡು ಚೀನಾದ ವೈದ್ಯಕೀಯ ವಿವಿ ಸಂಶೋಧನೆ ನಡೆಸಿದೆ. ವಾರದಲ್ಲಿ 30 ನಿಮಿಷಕ್ಕಿಂತ ಕಡಿಮೆ ಮೊಬೈಲ್ ಮಾತನಾಡಿದವರಿಗಿಂತ 30 ನಿಮಿಷಕ್ಕಿಂತ ಹೆಚ್ಚು ಮಾತನಾಡುವವರಲ್ಲಿ ಬಿಪಿ ಸಮಸ್ಯೆ ಕಾಣಿಸಿಕೊಂಡಿದೆ. ಬಿಪಿಯಿಂದ ಹೃದಯಾಘಾತ, ಪಾರ್ಶ್ವವಾಯು ಸಂಭವಿಸಲು ಪ್ರಮುಖ ಕಾರಣವಾಗಿದ್ದು, ಆಕಾಲಿಕ ಮರಣಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಜಾಗತಿಕವಾಗಿ 10 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಮುಕ್ಕಾಲು ಭಾಗ ಮೊಬೈಲ್ ಬಳಸುತ್ತಿದ್ದಾರೆ. ಮೊಬೈಲ್ ಫೋನ್ ಕಡಿಮೆ ಮಟ್ಟದ ರೇಡಿಯೋಫ್ರೀಕ್ವೆನ್ಸಿ ಶಕ್ತಿ ಹೊರಸೂಸುತ್ತದೆ. ನಿರಂತರ ಮೊಬೈಲ್ ಬಳಕೆ ರಕ್ತದೊತ್ತಡದ ಸಮಸ್ಯೆ ಉಂಟುಮಾಡುತ್ತದೆ ಎಂದು ಹೇಳಲಾಗಿದೆ.