ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಸೋಯಾ ಬೀನ್ ನಿಂದ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಹೇಗೆನ್ನುತ್ತೀರಾ.
ಸೋಯಾ ಬೀನ್ ಪೇಸ್ಟ್ ತಯಾರಿಸಿ ಮುಖಕ್ಕೆ ಮಾಯಿಸ್ಚರೈಸರ್ ರೀತಿ ಹಚ್ಚಿಕೊಂಡರೆ ನಿಮ್ಮ ತ್ವಚೆಯ ಮೇಲಿರುವ ವಯಸ್ಸಾದ ಸುಕ್ಕಿನ ಲಕ್ಷಣಗಳು ದೂರವಾಗುತ್ತವೆ. ತ್ವಚೆಯ ಎಣ್ಣೆಯಂಶ ಇಲ್ಲವಾಗುತ್ತದೆ.
ಉಗುರುಗಳನ್ನು ಗಟ್ಟಿಗೊಳಿಸಲೂ ಇದನ್ನು ಬಳಸಬಹುದು. ನಿರಂತರವಾಗಿ ಸೋಯಾ ಸೇವಿಸುವುದರಿಂದ ಉಗುರಿನ ಸೋಂಕಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಶಿಲೀಂಧ್ರಗಳನ್ನು ಓಡಿಸಲು ಸೋಯಾ ಸಾಸ್ ನಲ್ಲಿ ನಿಮ್ಮ ಬೆರಳುಗಳನ್ನು ಮುಳುಗಿಸಿಟ್ಟರೂ ಸಾಕು.
ಮೊದಲು ಸೋಯಾ ಬೀನ್ ಅನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಬೆರೆಸಿ. ಈ ಮಿಶ್ರಣವನ್ನು ಪೇಸ್ಟ್ ರೂಪಕ್ಕೆ ತಂದು ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ. ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಹೀಗೆ ಮಾಡುವುದು ಒಳ್ಳೆಯದು.
ಸೋಯಾಬೀನ್ ಜ್ಯೂಸ್ ತೆಗೆದು ಅದರಿಂದ ಕೂದಲು ಹಾಗೂ ತಲೆಬುರುಡೆಗೆ ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ಕೂದಲು ತೊಳೆಯಿರಿ. ಸತತ ಮೂರು ತಿಂಗಳು ಇದನ್ನು ಮಾಡುವುದರಿಂದ ನಿಮ್ಮ ಕೂದಲು ದಪ್ಪವಾಗುತ್ತದೆ.