
ಅಡುಗೆ ಮಾಡುವಾಗ ʼಮೇರೆ ನೈನಾ ಸಾವನ್ ಬಾಧೋ ಫಿರ್ ಭೀ ಮೇರಾ ಮನ್ ಪ್ಯಾಸಾ……ʼ ಹಾಡನ್ನು ಸುಮಧುರವಾಗಿ ಹಾಡಿದ ಮಹಿಳೆ ನೆನಪಿದೆಯೇ ? ಆಕೆಯ ವೀಡಿಯೊ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಆಕೆಯ ಮಧುರ ಧ್ವನಿಯು ಇಂಟರ್ನೆಟ್‌ನಲ್ಲಿ ಸ್ವಲ್ಪ ಸಮಯದಲ್ಲೇ ಗೆದ್ದಿದೆ.
ಇದೀಗ, ವಿಡಿಯೋ ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಪುನಃ ವೈರಲ್ ಆಗುತ್ತಿದೆ. ಈ ಸಮಯದಲ್ಲಿ, ಇದು ನಟ ಸೋನು ಸೂದ್ ಅವರ ಗಮನವನ್ನೂ ಸೆಳೆದಿದೆ. ಸೋನು ಸೂದ್ ಮಹಿಳೆಯ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಮುಂಬರುವ ಚಿತ್ರದಲ್ಲಿ ಈಕೆಯಿಂದ ಹಾಡಿಸುವ ಸಲುವಾಗಿ ಮಹಿಳೆಯ ಸಂಪರ್ಕ ಸಂಖ್ಯೆ ಇದ್ದರೆ ನೀಡುವಂತೆ ಕೇಳಿದ್ದಾರೆ.
ಈ ವಿಡಿಯೋವನ್ನು ಮೂಲತಃ ಮುಖೇಶ್ ಕುಮಾರ್ ಸಿನ್ಹಾ ಅವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಹಿಳೆಯ ಮಗಳು ರೊಟ್ಟಿ ಮಾಡುವಾಗ ಹಾಡೊಂದನ್ನು ಹಾಡುವಂತೆ ಒತ್ತಾಯಿಸಿದ್ದಾಳೆ. ಸ್ವಲ್ಪ ತಡವರಿಸಿದ ನಂತರ, ಮಹಿಳೆ ಆರ್‌ಡಿ ಬರ್ಮನ್ ಸಂಯೋಜಿಸಿದ ಹಾಡನ್ನು ಹಾಡಿದರು. ಇದು ನೆಟ್ಟಿಗರ ಹೃದಯ ಗೆದ್ದಿದೆ.