ಸಾಫ್ಟ್‌ವೇರ್‌ ಕೋರ್ಸ್‌: ತರಬೇತಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರ ಪ್ರಮಾಣೀಕರಿಸಿದ ಅತ್ಯಾಧುನಿಕ ಕಂಪ್ಯೂಟರ್‌ ಸಾ‍ಫ್ಟ್‌ವೇರ್‌ ಕೋರ್ಸ್‌ಗಳ ತರಬೇತಿಗಾಗಿ ರಾಷ್ಟ್ರೀಯ ಕೌಶಲ ಅಕಾಡೆಮಿ ಅರ್ಜಿ ಆಹ್ವಾನಿಸಿದೆ.

12ನೇ ತರಗತಿ ಉತ್ತೀರ್ಣರಾದವರು, ಎಂಜಿನಿಯರಿಂಗ್‌, ಪದವಿ, ಸ್ನಾತಕೋತ್ತರ, ಎಂಬಿಎ, ಪಾಲಿಟೆಕ್ನಿಕ್‌ ಡಿಪ್ಲೊಮಾ ಮಾಡಿರುವವರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟರ್‌ ಸಾಫ್ಟ್‌ವೇರ್‌ ತಂತ್ರಜ್ಞಾನದ ಕುರಿತಾದ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

ಇ–ಲರ್ನಿಂಗ್ ಮೂಲಕ ತರಬೇತಿ ನೀಡಲಾಗುತ್ತದೆ. ತರಬೇತಿ ಮುಗಿದ ಬಳಿಕ ಪರೀಕ್ಷೆ ನಡೆಸಲಾಗುತ್ತದೆ. ಸರ್ಕಾರದಿಂದ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ಈ ಕೋರ್ಸ್‌ 2ರಿಂದ 6 ತಿಂಗಳದ್ದಾಗಿದ್ದು, ವಿದ್ಯಾರ್ಥಿಗಳು ತಮ್ಮ ನೆಚ್ಚಿನ ವಿಷಯವನ್ನು ಆಳವಾಗಿ ಕಲಿಯುವುದಕ್ಕೆ ಅನುಕೂಲವಾಗುತ್ತದೆ. ಸ್ವರ್ಣ ಭಾರತ್‌ ರಾಷ್ಟ್ರೀಯ ಮಟ್ಟದ ಕೌಶಲ ಅಭಿವೃದ್ಧಿ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ಮಹಿಳೆಯರು, ಸೇನೆಯಿಂದ ನಿವೃತ್ತರಾದವರು ಮತ್ತು ಅವರ ಮಕ್ಕಳಿಗೆ ಶುಲ್ಕದಲ್ಲಿ ಶೇ 80ರಷ್ಟು ಸಹಾಯಧನವೂ ಸಿಗಲಿದೆ.

ಕೋರ್ಸ್‌ಗಳು: ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮತ್ತು ಪಿಜಿ ಡಿಪ್ಲೊಮಾ, ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ. ಅಲ್ಲದೇ 100ಕ್ಕೂ ಹೆಚ್ಚು ಕಂಪ್ಯೂಟರ್‌ ಸಾಫ್ಟ್‌ವೇರ್‌ ಸರ್ಟಿಫಿಕೇಟ್‌ ಕೋರ್ಸ್‌ಗಳಿವೆ. ಅವುಗಳಲ್ಲಿ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್‌, ಡೇಟಾ ಸೈನ್ಸ್‌, ಬಿಗ್‌ ಡೇಟಾ, ಕ್ಲೌಡ್‌ ಕಂಪ್ಯೂಟಿಂಗ್‌, ಸೈಬರ್ ಸೆಕ್ಯುರಿಟಿ, ಎಥಿಕಲ್ ಹ್ಯಾಕಿಂಗ್‌, ಕಂಪ್ಯೂಟರ್‌ ಫೊರೆನ್ಸಿಕ್‌ ಪ್ರಮುಖವಾದವು.

ಅರ್ಜಿ ಸಲ್ಲಿಸಲು www.nationalskillacademy.in ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 9505800050, 9505800047

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read