ಮಾನ್ಸೂನ್ ನಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೀಗಿರಲಿ ತ್ವಚೆ ಆರೈಕೆ

ಮಳೆಗಾಲದಲ್ಲಿ ನಮ್ಮ ವೇಷ ಭೂಷಣ, ಆಹಾರಕ್ರಮ ಎಲ್ಲವೂ ಬದಲಾಗುತ್ತದೆ. ಬೆಚ್ಚನೆಯ ಉಡುಪು ಧರಿಸಲಾರಂಭಿಸುತ್ತೇವೆ. ಬೇಸಿಗೆಯಲ್ಲಿ ಕೋಲ್ಡ್‌ ಜ್ಯೂಸ್‌ ಕುಡಿಯುತ್ತಿದ್ದ ನಾವೆಲ್ಲಾ ಈಗ ಬಿಸಿ ಕಾಫಿ, ಮಸಾಲೆ ಟೀ ಕುಡಿಯಲು ಇಷ್ಟ ಪಡುತ್ತೇವೆ.

ಬೇಸಿಗೆ, ಮಳೆ, ಚಳಿ ಈ ಮೂರು ಕಾಲಕ್ಕೆ ಒಂದೇ ರೀತಿಯ ತ್ವಚೆ ಆರೈಕೆಯ ವಿಧಾನ ಪಾಲಿಸಲು ಸಾಧ್ಯವಿಲ್ಲ. ಕಾಲ ಬದಲಾದಂತೆ ತ್ವಚೆ ಆರೈಕೆಯ ವಿಧಾನವೂ ಬದಲಾಗಬೇಕು. ಈಗ ಮಾನ್ಸೂನ್‌ ಸೀಸನ್. ಈ ಸಮಯದಲ್ಲಿ ತ್ವಚೆ ಸೌಂದರ್ಯಕ್ಕಾಗಿ ಏನು ಮಾಡಬೇಕು, ಏನು ಮಾಡಬಾರದು ಅಂತ ತಿಳಿದುಕೊಳ್ಳಿ.

* ದಿನದಲ್ಲಿ ಮೂರು ಬಾರಿ ಫೇಸ್‌ವಾಶ್‌ ಹಾಕಿ ಮುಖ ತೊಳೆಯಿರಿ.

* ಆಲ್ಕೋಹಾಲ್ ಅಂಶವಿಲ್ಲದ ಟೋನರ್‌ ಬಳಸಿ. ಇದರಿಂದ ತ್ವಚೆಯಲ್ಲಿ ಪಿ ಎಚ್ ಬ್ಯಾಲೆನ್ಸ್ ಮಾಡಬಹುದು.

* ಸ್ನಾನದ ಬಳಿಕ ಮಾಯಿಶ್ಚರೈಸರ್‌ ಹಚ್ಚಿ.

* ಸೆನ್ಸಿಟಿವ್ ಸ್ಕಿನ್‌ ಇರುವವರು ಆರ್ಟಿಫಿಶಿಯಲ್ ಜ್ಯೂವೆಲರಿ ಬಳಸದಿರುವುದು ಸೂಕ್ತ.

* ಚಳಿಯೆಂದು ತುಂಬಾ ಬಿಸಿ ನೀರನ್ನು ಸ್ನಾನಕ್ಕೆ ಬಳಸಬೇಡಿ. ತ್ವಚೆಗೆ ಉಗುರು ಬೆಚ್ಚಗಿನ ನೀರು ಒಳ್ಳೆಯದು.

* ಎಲ್ಲಾ ಸಮಯದಲ್ಲಿ ಶೂ ಬಳಸಬೇಡಿ. ಕಾಲಿನ ತ್ವಚೆಗೆ ಸ್ವಲ್ಪ ಗಾಳಿಯಾಡಲಿ. ವಾಟರ್‌ ಫ್ರೂಪ್ ಶೂ ಬಳಸಿ, ಇಲ್ಲದಿದ್ದರೆ ನೀರು ನಿಂತು ಕಾಲಿನ ತ್ವಚೆಯಲ್ಲಿ ತುರಿಕೆ ಕಂಡು ಬರುತ್ತದೆ.

* ಉತ್ತಮ ಕೊಬ್ಬಿನಂಶವಿರುವ ಆಹಾರ ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read