ಕೆನಡಾದಲ್ಲಿ ಸಿಖ್ ಮಹಿಳೆಯೊಬ್ಬರು ತಮ್ಮ ಪುತ್ರನ ಪೇಟಕ್ಕೆ ಸರಿಹೊಂದುವಂಥ ಹೆಲ್ಮೆಟ್ ವಿನ್ಯಾಸಗೊಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.
ಬೈಕ್ ಸವಾರಿ ಮಾಡುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಅವಶ್ಯಕ ಮತ್ತು ಅನೇಕ ದೇಶಗಳಲ್ಲಿ ಇದು ಕಾನೂನು. ಆದರೆ, ಪೇಟಾಕ್ಕೆ ಸರಿ ಹೊಂದುವಂಥ ಒಂದೂ ಹೆಲ್ಮೆಟ್ ಮಾರುಕಟ್ಟೆಗೆ ಬಂದಿಲ್ಲ ಎನ್ನುವ ಕಾರಣಕ್ಕೆ ಟೀನಾ ಸಿಂಗ್ ಎಂಬ ಮಹಿಳೆ ಹೀಗೆ ಮಾಡಿದ್ದಾರೆ.
“ನನ್ನ ಮಕ್ಕಳಿಗೆ ಕ್ರೀಡಾ ಹೆಲ್ಮೆಟ್‌ಗಳಲ್ಲಿ ಸುರಕ್ಷಿತ ಆಯ್ಕೆ ಇಲ್ಲ ಎಂದು ನಾನು ನಿರಾಶೆಗೊಂಡಿದ್ದೆ. ಅದಕ್ಕಾಗಿ ಇದನ್ನು ಕಂಡುಹಿಡಿದೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೇಟಕ್ಕೆ ಸೂಕ್ತವಾದ ಹೆಲ್ಮೆಟ್ ಅನ್ನು ಸ್ವತಃ ವಿನ್ಯಾಸಗೊಳಿಸಿದ್ದೇನೆ. ಇದಕ್ಕಾಗಿ ಎರಡು ವರ್ಷಗಳನ್ನು ತೆಗೆದುಕೊಂಡಿದ್ದೇನೆ. ಸುರಕ್ಷತೆಯ ಮಾನದಂಡಗಳನ್ನು ಸ್ಟಡಿ ಮಾಡಿದ ಬಳಿಕವೇ ಇದನ್ನು ತಯಾರು ಮಾಡಿರುವುದಾಗಿ ಟೀನಾ ಹೇಳಿದ್ದಾರೆ.