
ರಾಯಚೂರು: ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕ್ಕಕೊಟ್ನೇಕಲ್ ಬಳಿ ನಡೆದಿದೆ.
ಶ್ರೀಶೈಲ ದಡುತಿ ಮೃತ ಯುವಕ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಮೂಲದವನು. ಬಿಸಿಲ ಝಳದ ಮಧ್ಯೆ ಯುವಕ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದ. ಮಾರ್ಗ ಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಬಿರು ಬಿಸಿಲಿನಲ್ಲಿ ಪಾದಯಾತ್ರೆ ವೇಳೆ ಯುವಕ ತೀವ್ರವಾಗಿ ದಣಿದಿದ್ದ. ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾನೆ.