
ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಅದ್ದೂರಿ ದಸರಾ ಮಹೋತ್ಸವ ನಡೆಯುತ್ತಿದ್ದು, ಜಂಬೂಸವಾರಿಗೂ ಮುನ್ನ ಹಿರಣ್ಯ ಆನೆ ಭಯಗೊಂಡು ಅಡ್ಡಾದಿಡ್ದಿ ಓಡಿದ ಘಟನೆ ನಡೆದಿದೆ.
ಆನೆಯ ರಂಪಾಟಕ್ಕೆ ಭಯಭೀತರಾದ ಜನರು ದಿಕ್ಕಪಾಲಾಗಿ ಓಡಿದ್ದಾರೆ. ತಕ್ಷಣ ಎಚ್ಚೆತ್ತ ಮಾವುತ ಹಾಗೂ ಕಾವಾಡಿಗರು ಸಂಭವಿಸಲಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ಶ್ರೀರಂಗಪಟ್ತಣಕ್ಕೆ ನಿನ್ನೆಯಷ್ಟೇ ಮಹೇಂದ್ರ, ಲಕ್ಷ್ಮೀ, ಹಿರಣ್ಯ ಎಂಬ ಮೂರು ಆನೆಗಳು ಆಗಮಿಸಿವೆ. ಬನ್ನಿಮಂಟಪದಿಂದ ರಂಗನಾಥ ಮೈದಾನದವರೆಗೆ ಅಂಬಾರಿ ಜೊತೆ ಹಿರಣ್ಯ ಆನೆ ಹೆಜ್ಜೆ ಹಾಕಲಿದೆ. ಮಹೇಂದ್ರ ಆನೆ ಮರದ ಅಂಬಾರಿ ಹೊರಲಿದೆ. ಹಿರಣ್ಯ ಆನೆಗೆ ಚಿತ್ರಾಲಂಕಾರ ಮಾಡಿದ ಬಳಿಕ ಹಿರಣ್ಯ ಆನೆ ಗಾಬರಿಯಾಗಿ ಓಡಲಾರಂಭಿಸಿದೆ. ಆನೆ ಬರುತ್ತಿರುವುದು ಕಂಡು ಭಯಗೊಂಡ ಜನರು ಎದ್ದುಬಿದ್ದು ದಿಕ್ಕಾಪಾಲಾಗಿ ಓಡಿದ್ದಾರೆ. ಸದ್ಯ ಮಾವುತರು ಆನೆಯನ್ನು ಸಮಾಧಾನ ಪಡಿಸಿದ್ದಾರೆ.