ಕೋಲಾರ : ಹಾಲು ಉತ್ಪಾದಕರಿಗೆ ಕೋಚಿಮುಲ್ ಬಿಗ್ ಶಾಕ್ ನೀಡಿದ್ದು, ರೈತರಿಂದ ಖರೀದಿಸುವ ಹಾಳಿನ ದರವನ್ನು 1 ರೂ. ಇಳಿಕೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮಾಲೂರು ಶಾಸಕ, ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ರೈತರಿಂದ ಖರೀದಿಸುವ ಹಾಲಿನ ದರ ಒಂದು ರೂಪಾಯಿಯಷ್ಟೇ ಇಳಿಕೆ ಮಾಡಲಾಗಿದೆ. 3 ತಿಂಗಳಿಂದ ಬೆಂಗಳೂರು ಒಕ್ಕೂಟ ಲೀಟರ್ಗೆ 5 ರೂ. ಇಳಿಸಿದೆ ಎಂದು ಹೇಳಿದ್ದಾರೆ.
ನಮ್ಮಲ್ಲಿ 400 ಕೋಟಿ ರೂ. ಯೋಜನೆಗಳು ನಡೆಯುತ್ತಿವೆ. ಅದು ಸರ್ಕಾರದ ಪ್ರಾಜೆಕ್ಟ್ ಅಲ್ಲ, ಒಕ್ಕೂಟದಿಂದ ಮಾಡಲಾಗುತ್ತಿರುವ ಯೋಜನೆ, ಎಂ.ವಿ.ಕೆ ಗೋಲ್ಡೆನ್ ಡೈರಿ, ಐಸ್ ಕ್ರೀಂ ಪ್ಲಾಂಟ್, ಸೋಲಾರ್ ಪ್ಲಾಂಟ್ ಮಡಲಾಗುತ್ತಿದೆ, ಒಕ್ಕೂಟ ಲಾಭದಾಯಕವಾಗಿದೆ. ಆದರೆ ಒಕ್ಕೂಟದ ಅಭಿವೃದ್ದಿಗೆ ಹಣ ಬೇಕಾಗಿದೆ ಎಂದು ತಿಳಿಸಿದ್ದಾರೆ.