ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣವನ್ನು ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಈ ಬಗ್ಗೆಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ.
ವಿಧಾನಸೌಧದ ಗ್ರ್ಯಾಂದ್ ಸ್ಟೆಪ್ ಗಳ ಮೇಲೆ ಐರಾವತ ಕ್ಲಬ್ ಕ್ಲಾಸ್ 2.0 ಬಸ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮತ್ತೆ ಟಿಕೆಟ್ ವ್ಯವಸ್ಥೆ ಜಾರಿ ಬಗ್ಗೆ ಸುಳಿವು ನೀಡಿದ್ದಾರೆ.
ಹಲವು ಜನರು ನನಗೆ ಮೇಲ್, ಮೆಸೇಜ್ ಗಳನ್ನು ಮಡಿ ನಾವು ಬಸ್ ನಲ್ಲಿ ಟಿಕೆಟ್ ದರ ನೀದಲು ಸಿದ್ಧರಿದ್ದೇವೆ. ನಮಗೆ ಉಚಿತ ಪ್ರಯಾಣ ಬೇಡ ಎಂದು ಹೇಳುತ್ತಿದ್ದಾರೆ. ನಾವು ಟಿಕೆಟ್ ದುಡ್ಡು ಕೊಟ್ಟರೂ ಬಸ್ ನವರು ತೆಗೆದುಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಸಾರಿಗೆ ಸಚಿವ ರಾಮ ಲಿಂಗಾ ರೆಡ್ಡಿ ಅವರ ಜೊತೆ ಚರ್ಚಿಸಿ ಈ ಬಗ್ಗೆ ತೀರ್ಮನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.