ಬೆಂಗಳೂರು : ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ‘ಶಕ್ತಿ ಯೋಜನೆ’ ಜಾರಿಗೆ ಬಂದ ಪರಿಣಾಮ ಸಿಎಂ ಸಿದ್ದರಾಮಯ್ಯ ಸರ್ಕಾರ ತನ್ನ ಬೊಕ್ಕಸಕ್ಕೆ ಆದ ನಷ್ಟವನ್ನು ಸರಿದೂಗಿಸಲು ಮತ್ತೊಂದು ಹೊಸ ಪ್ಲ್ಯಾನ್ ಮಾಡಿದೆ. ಹೌದು. ಇದೀಗ ಕೆಎಸ್ ಆರ್ ಟಿಸಿ ಬಸ್ ಬಾಡಿಗೆ ದರ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ.
ಆದಾಯದ ಮೂಲ ಹೆಚ್ಚಿಸುವ ಸಲುವಾಗಿ ಕೆಎಸ್ ಆರ್ ಟಿಸಿ ಈ ಭರ್ಜರಿ ಪ್ಲ್ಯಾನ್ ಮಾಡಿದೆ. ಮದುವೆ, ಪ್ರವಾಸ ಹಾಗೂ ಇನ್ನಿತರ ಸಮಾರಂಭಗಳಿಗೆ ಬಾಡಿಗೆಗೆ ಪಡೆಯುವ ಕರ್ನಾಟಕ ಸಾರಿಗೆ, ರಾಜಹಂಸ, ಎಕ್ಸಿಕ್ಯೂಟಿವ್, ರಾಜಹಂಸ ಬಸ್ಗಳ ದರ ಏರಿಕೆ ಮಾಡಲಿದೆ . ಹೊಸ ಪರಿಷ್ಕ್ರತ ದರಗಳು ಮುಂದಿನ ತಿಂಗಳು ಅಂದರೆ ಆಗಸ್ಟ್ ಒಂದನೇ ತಾರೀಖಿನಿಂದ ಜಾರಿಗೆ ಬರಲಿದೆ.
ಕರ್ನಾಟಕ ಸಾರಿಗೆಯ ಸಾಮಾನ್ಯ ಬಸ್ಗಳು ಪ್ರತೀ ಕಿಲೋ ಮೀಟರ್ಗೆ ರಾಜ್ಯದಲ್ಲಿ ಸುಮಾರು 47 ರೂಪಾಯಿಗಳು ಮತ್ತು ಬೇರೆ ರಾಜ್ಯದಲ್ಲಿ 50 ರೂಪಾಯಿಗಳಿಗೆ ದರಗಳನ್ನು ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ. ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ರಾಜ್ಯದಲ್ಲಿ 48 ರುಪಾಯಿಗಳಿಗೂ ಮತ್ತು ಅಂತರ್ ರಾಜ್ಯದಲ್ಲಿ 52 ರೂಪಾಯಿಗಳನ್ನು ಪ್ರತೀ ಕಿಲೋ ಮೀಟರ್ಗೆ ನಿಗದಿ ಪಡಿಸಲಾಗಿದೆ ಎಂದು ಹೇಳಲಾಗಿದೆ. ಪ್ರತಿ ಕಿಮೀಗೆ 2 ರೂನಿಂದ 5 ರೂವರೆಗೆ ಹೆಚ್ಚಿಸಲಾಗಿದೆ. ರಾಜ್ಯದೊಳಗೆ ಮತ್ತು ಅಂತರಾಜ್ಯಕ್ಕೆ ಸಂಚರಿಸಲು ಪಡೆಯಲಾಗುವ ಬಸ್ ಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.