ನೀವು ತಿನ್ನುವ ಆಹಾರ ನಿಮ್ಮ ದೇಹ, ಆರೋಗ್ಯದ ಮೇಲೊಂದೇ ಅಲ್ಲ ನಿಮ್ಮ ಸೆಕ್ಸ್ ಜೀವನದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಸಂಗಾತಿಗಳಿಬ್ಬರು ಬಯಸಿದ್ರೂ ಕೆಲವೊಮ್ಮೆ ಸೆಕ್ಸ್ ಸಾಧ್ಯವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ನೀವು ಸೇವಿಸುವ ರಾತ್ರಿ ಆಹಾರ ಎನ್ನುತ್ತಾರೆ ತಜ್ಞರು.
ರಾತ್ರಿ ಊಟ ಸೆಕ್ಸ್ ಜೀವನದ ಮೇಲೆ ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮ ಬೀರುತ್ತದೆ. ಹಾಗಾಗಿ ರಾತ್ರಿ ಊಟಕ್ಕೆ ನೀವು ಏನನ್ನು?ಎಷ್ಟು? ಹಾಗೂ ಯಾವಾಗ? ತಿನ್ನುತ್ತಿದ್ದೀರಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ರಾತ್ರಿಯ ಊಟ ಯಾವಾಗ್ಲೂ ಕಡಿಮೆ ಹಾಗೂ ಪೌಷ್ಠಿಕತೆಯಿಂದ ಕೂಡಿರಬೇಕು.
ರಾತ್ರಿ ಮಲಗುವ 2 ಗಂಟೆ ಮೊದಲು ಆಹಾರ ಸೇವನೆ ಮಾಡಬೇಕು. ಇದು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಹಾಗೆ ರಾತ್ರಿ ಊಟದ ಜೊತೆ ಆಲ್ಕೋಹಾಲ್ ಸೇವನೆ ಮಾಡಿದ್ರೆ ಪುರುಷರಲ್ಲಿ ಸೆಕ್ಸ್ ಆಸಕ್ತಿ ಕಡಿಮೆಯಾಗುತ್ತದೆ ಎಂಬುದು ನೆನಪಿರಲಿ. ಇಬ್ಬರಿಗೂ ಇಷ್ಟವಾಗುವ ಆಹಾರವನ್ನು ಒಟ್ಟಿಗೆ ಕುಳಿತು ನಿಧಾನವಾಗಿ ಸೇವನೆ ಮಾಡಿ. ಇದು ಸೆಕ್ಸ್ ಆರಂಭವೆಂದ್ರೆ ತಪ್ಪಾಗಲಾರದು. ಅಡುಗೆ ವಿಚಾರಕ್ಕೆ ನಡೆಯುವ ಗಲಾಟೆ ಸೆಕ್ಸ್ ಮೇಲೆ ಪ್ರಭಾವ ಬೀರುತ್ತದೆ. ಜೊತೆಗೆ ಊಟವಾದ ಮೇಲೆ ಸಿಹಿಯನ್ನು ರಾತ್ರಿ ತಿನ್ನಬೇಡಿ. ಇದು ಲೈಂಗಿಕ ಜೀವನಕ್ಕೆ ಒಳ್ಳೆಯದಲ್ಲ.